ಬಟ್ಟೆ ವ್ಯಾಪಾರಿ ನಾಪತ್ತೆ
Update: 2022-01-31 21:35 IST
ಬ್ರಹ್ಮಾವರ, ಜ.31: ಕೊರೋನ ಕಾರಣದಿಂದ ವ್ಯವಹಾರ ಇಲ್ಲದೆ ಹಣದ ಸಮಸ್ಯೆ ಎದುರಿಸುತ್ತಿದ್ದ ಬಟ್ಟೆ ಅಂಗಡಿ ವ್ಯಾಪಾರಿಯೊಬ್ಬರು ನಾಪತ್ತೆಯಾಗಿರುವ ಘಟನೆ ಬಾರಕೂರಿನಲ್ಲಿ ನಡೆದಿದೆ.
ಬ್ರಹ್ಮಾವರ ಚಾಂತಾರು ಗ್ರಾಮದ ಸಿದ್ಧಾರ್ಥ ರೆಸಿಡೆನ್ಸಿ ನಿವಾಸಿ ರಮೇಶ ಮಹಾಬಲ ಮರಕಾಲ(49) ಎಂಬವರು ಬಾರ್ಕೂರಿನಲ್ಲಿ ಬಟ್ಟೆ ಅಂಗಡಿ ವ್ಯವಹಾರ ಮಾಡಿಕೊಂಡಿದ್ದು, ಜ.26ರಂದು ಬೆಳಗ್ಗೆ ಧರ್ಮಸ್ಥಳಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವರು ಈವರೆಗೆ ವಾಪಾಸ್ಸು ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದೆ.