2019ರ ಸಾಲಿನ ʼಮಿಸ್ ಅಮೆರಿಕʼ ಚೆಸ್ಲೀ ಕ್ರಿಸ್ಟ್ ಕಟ್ಟಡದಿಂದ ಜಿಗಿದು ಆತ್ಮಹತ್ಯೆ

Update: 2022-01-31 17:39 GMT
ಚೆಸ್ಲೀ ಕ್ರಿಸ್ಟ್(photo:twitter/@CheslieKryst)

ನ್ಯೂಯಾರ್ಕ್, ಜ.31: 2019ರ ಸಾಲಿನ ಮಿಸ್ ಅಮೆರಿಕ ಸೌಂದರ್ಯ ಸ್ಪರ್ಧೆಯ ವಿನ್ನರ್ ಚೆಸ್ಲೀ ಕ್ರಿಸ್ಟ್ (30 ವರ್ಷ) 60 ಮಹಡಿಯ ಕಟ್ಟಡದಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಬ್ಯೂಟಿ ಕ್ವೀನ್, ನ್ಯಾಯವಾದಿ, ಫ್ಯಾಶನ್ ಕುರಿತ ಬ್ಲಾಗ್ ಬರಹಗಾರ್ತಿ, ಟಿವಿ ನಿರೂಪಕಿ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಛಾಪು ಮೂಡಿಸಿದ್ದ ಕ್ರಿಸ್ಟ್, ರವಿವಾರ ಬೆಳಿಗ್ಗೆ 7 ಗಂಟೆ ವೇಳೆ ನ್ಯೂಯಾರ್ಕ್ ನಗರದ 60 ಮಹಡಿಯ ಕಟ್ಟಡದಿಂದ ಕೆಳಗೆ ಬಿದ್ದು ಸ್ಥಳದಲ್ಲೇ ಮೃತರಾಗಿದ್ದಾರೆ. 9ನೇ ಮಹಡಿಯಲ್ಲಿ ವಾಸಿಸುತ್ತಿದ್ದ ಕ್ರಿಸ್ಟ್ ಆತ್ಮಹತ್ಯೆ ಮಾಡಿಕೊಂಡಿರುವುದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ. ಆದರೆ ಮರಣೋತ್ತರ ಪರೀಕ್ಷೆಯ ಬಳಿಕ ಸ್ಪಷ್ಟ ಮಾಹಿತಿ ಲಭಿಸಲಿದೆ ಎಂದು ನ್ಯೂಯಾರ್ಕ್ ಪೊಲೀಸ್ ವಿಭಾಗದ ವಕ್ತಾರರನ್ನು ಉದ್ದೇಶಿಸಿ ಮಾಧ್ಯಮಗಳು ವರದಿ ಮಾಡಿವೆ.

ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದ ಕ್ರಿಸ್ಟ್, ರವಿವಾರ ಬೆಳಗ್ಗಿನ ದುರ್ಘಟನೆಗೂ ಸ್ವಲ್ಪ ಹೊತ್ತಿನ ಮುಂಚೆ ಇನ್‌ಸ್ಟಾಗ್ರಾಮ್‌ನಲ್ಲಿ ತನ್ನ ಗ್ಲ್ಯಾಮರಸ್ ಫೋಟೋ ಅಪ್ಲೋಡ್ ಮಾಡಿದ್ದರು. ಜತೆಗೆ ‘ಈ ದಿನ ನಿಮಗೆ ಶಾಂತಿ ಮತ್ತು ವಿಶ್ರಾಂತಿ ತರಲಿ’  ಎಂದು ಬರೆದಿದ್ದರು. ಈ ಬಾರಿಯ ಮಿಸ್ ನಾರ್ಥ್ ಕ್ಯರೊಲಿನಾ ಅಮೆರಿಕ ಸ್ಪರ್ಧೆಯಲ್ಲಿ ವಿಜೇತರಾದ ಮೋರ್ಗನ್ ರೊಮನೊ ಹಾಗೂ ಮಿಸ್ ನಾರ್ಥ್ ಕ್ಯರೊಲಿನಾ ಟೀನ್ ಸ್ಪರ್ಧೆಯಲ್ಲಿ ವಿಜೇತರಾದ ಗ್ಯಾಬಿ ಆರ್ಟೆಗಾರಿಗೆ ಶನಿವಾರ ಶುಭಾಷಯ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News