ಕೇಂದ್ರ ಬಜೆಟ್ 2022: ಯಾವುದು ಅಗ್ಗ... ಯಾವುದು ದುಬಾರಿ...
ಹೊಸದಿಲ್ಲಿ,ಫೆ.1: 2022-23ನೇ ಸಾಲಿನ ಕೇಂದ್ರ ಮುಂಗಡಪತ್ರ(Union Budget 2022)ವನ್ನು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಸಂಸತ್ತಿನಲ್ಲಿ ಮಂಡಿಸಿದ್ದಾರೆ. ನರೇಂದ್ರ ಮೋದಿ ಸರಕಾರವು ಮೂಲಸೌಕರ್ಯಕ್ಕೆ ಅತ್ಯಂತ ಹೆಚ್ಚಿನ ಆದ್ಯತೆ ನೀಡಿದೆ. ಏಶ್ಯದ ಮೂರನೇ ಬೃಹತ್ ಆರ್ಥಿಕತೆಯು ಕೋವಿಡ್ ಹಿಂಜರಿತದಿಂದ ಚೇತರಿಸಿಕೊಳ್ಳುತ್ತಿದ್ದು ಮುಂಗಡಪತ್ರವು ಸಾರ್ವಜನಿಕ ಹೂಡಿಕೆಗಳ ಮೂಲಕ ಆರ್ಥಿಕ ಬೆಳವಣಿಗೆಗೆ ಬುನಾದಿಯನ್ನು ಹಾಕಲಿದೆ ಎಂದು ಸೀತಾರಾಮನ್ ಹೇಳಿದರು.
ಮುಂಗಡಪತ್ರದಲ್ಲಿ ಪ್ರಸ್ತಾವಿಸಿರುವಂತೆ ಮೊಬೈಲ್ ಫೋನ್‌ಗಳು ಮತ್ತು ಮೊಬೈಲ್ ಫೋನ್ ಚಾರ್ಜರ್‌ಗಳು ಸೇರಿದಂತೆ ಸಾಮಾನ್ಯ ಬಳಕೆಯ ಹಲವಾರು ವಸ್ತುಗಳು ಅಗ್ಗವಾಗಲಿವೆ.
ಕತ್ತರಿಸಿದ ಮತ್ತು ಪಾಲಿಷ್ ಮಾಡಲಾದ ವಜ್ರಗಳು ಮತ್ತು ರತ್ನಗಳ ಮೇಲಿನ ಸೀಮಾ ಸುಂಕ (ಕಸ್ಟಮ್ಸ್ ಡ್ಯೂಟಿ)ವನ್ನು ಶೇ.5ಕ್ಕೆ ತಗ್ಗಿಸಲಾಗಿದೆ ಮತ್ತು ಕ್ರಮೇಣ 350ಕ್ಕೂ ಅಧಿಕ ಸೀಮಾಶುಲ್ಕ ವಿನಾಯಿತಿಗಳನ್ನು ಹಂತಹಂತವಾಗಿ ತೆಗೆದುಹಾಕಲಾಗುವುದು ಎಂದು ಸೀತಾರಾಮನ್ ತಿಳಿಸಿದರು.
ಇವು ಅಗ್ಗವಾಗಲಿವೆ
►ಬಟ್ಟೆಗಳು
►ವಜ್ರಗಳು ಮತ್ತು ರತ್ನಗಳು
►ಇಮಿಟೇಷನ್ ಜ್ಯುವೆಲರಿ
►ಮೊಬೈಲ್ ಫೋನ್‌ಗಳು
►ಮೊಬೈಲ್ ಫೋನ್ ಚಾರ್ಜರ್‌ಗಳು
►ಪೆಟ್ರೋಲಿಯಂ ಉತ್ಪನ್ನಗಳಿಗೆ ಅಗತ್ಯವಾದ ರಾಸಾಯನಿಕಗಳು
►ಮೆಥನಾಲ್ ಸೇರಿದಂತೆ ಕೆಲವು ರಾಸಾಯನಿಕಗಳು
►ಗುಜರಿ ಉಕ್ಕಿನ ಮೇಲಿನ ಸೀಮಾಸುಂಕ ರಿಯಾಯಿತಿ ಇನ್ನೂ ಒಂದು ವರ್ಷ ಮುಂದುವರಿಕೆ
ಇವು ದುಬಾರಿಯಾಗಲಿವೆ
►ಎಲ್ಲ ಆಮದು ಸರಕುಗಳು
►ಕೊಡೆಗಳ ಮೇಲಿನ ಸುಂಕ ಏರಿಕೆ
ಇದನ್ನೂ ಓದಿ: ಕ್ರಿಪ್ಟೋ ಟ್ಯಾಕ್ಸ್? - ಡಿಜಿಟಲ್ ಸ್ವತ್ತುಗಳ ಆದಾಯದ ಮೇಲೆ ಶೇ 30ರಷ್ಟು ತೆರಿಗೆ ಘೋಷಿಸಿದ ವಿತ್ತ ಸಚಿವೆ