×
Ad

ಉ.ಪ್ರ ಕಾಂಗ್ರೆಸ್ ಕಚೇರಿಯಲ್ಲಿ ಕನ್ನಯ್ಯಾ ಕುಮಾರ್ ಮೇಲೆ ʼರಾಸಾಯನಿಕʼ ಎರಚಲು ಯತ್ನಿಸಿದ ಯುವಕ !

Update: 2022-02-01 17:18 IST

ಲಕ್ನೋ: ಕಾಂಗ್ರೆಸ್ ನಾಯಕ ಕನ್ನಯ್ಯಾ ಕುಮಾರ್ ಅವರ ಮೇಲೆ ರಾಸಾಯನಿಕ ಎರಚಲು ಓರ್ವ ಯುವಕ ಯತ್ನಿಸಿದ ಘಟನೆ ಇಂದು ಇಲ್ಲಿರುವ ಉತ್ತರ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಾಲಯದಲ್ಲಿ ನಡೆದಿದೆ.

ಕಾರ್ಯಾಲಯದಲ್ಲಿದ್ದ ಪಕ್ಷ ಕಾರ್ಯಕರ್ತರು ತಕ್ಷಣ ಆ ಯುವಕನನ್ನು ತಮ್ಮ ವಶಕ್ಕೆ ಪಡೆದು ಸಂಭಾವ್ಯ ಅಪಾಯವನ್ನು ತಪ್ಪಿಸಿದರು.

ಪಕ್ಷ ಆಯೋಜಿಸಿದ್ದ ʼಯುವ ಸಂಸದ್' ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಲೆಂದು ಕನ್ನಯ್ಯಾ ಕುಮಾರ್ ಅವರು ಕಾಂಗ್ರೆಸ್ ಕಾರ್ಯಾಲಯಕ್ಕೆ ಆಗಮಿಸಿದ್ದರು.

ಕನ್ನಯ್ಯಾ ಅವರತ್ತ ರಾಸಾಯನಿಕ ಎರಚಲು ಯತ್ನಿಸಿದ ಯುವಕನನ್ನು ದೇವಾಂಶ್ ಬಾಜಪೇಯಿ ಎಂದು ಗುರುತಿಸಲಾಗಿದೆ ಎಂದು  ಪಕ್ಷ ನಾಯಕರೊಬ್ಬರು ತಿಳಿಸಿದ್ದಾರೆ. ಮೊದಲು ಕನ್ಹಯ್ಯಾರನ್ನು ಗುರಿಯಾಗಿಸಿ ʼಶಾಯಿʼ ಎರಚಲಾಗಿತ್ತು ಎಂದು ಹೇಳಿದರೂ, ಬಳಿಕ ಅದು ರಾಸಾಯನಿಕವಾಗಿತ್ತು ಎಂದು ಹಲವು ಮುಖಂಡರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News