×
Ad

ಹಿಜಾಬ್‌ ವಿವಾದ: ಕುಂದಾಪುರ ಕಾಲೇಜು ಪ್ರಕರಣದ ಸುದ್ದಿ ಹಂಚಿಕೊಂಡ ಯುಎಇ ರಾಜಕುಮಾರಿ

Update: 2022-02-04 23:57 IST

ಶಾರ್ಜಾ: ಕರ್ನಾಟಕದ ಸರ್ಕಾರಿ ಕಾಲೇಜುಗಳ ಹಿಜಾಬ್‌ ಪ್ರಕರಣವು ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಹಿಜಾಬ್‌ ವಿವಾದದ ಕುರಿತಂತೆ ರಾಷ್ಟ್ರ ಮಟ್ಟದ ಹಲವು ನಾಯಕರು ಪರ-ವಿರೋಧದ ಹೇಳಿಕೆಗಳನ್ನು ನೀಡುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಂತೂ ಈ ಕುರಿತು ಬಿರುಸಿನ ಚರ್ಚೆಗಳು ನಡೆಯುತ್ತಿವೆ. ಈ ನಡುವೆಯುಎಇ ರಾಜಕುಮಾರಿ ಹೆಂದ್ ಬಿಂತ್‌ ಫೈಸಲ್ ಅಲ್‌ ಕಾಸಿಮಿ ಕುಂದಾಪುರ ಕಾಲೇಜಿನ ಪ್ರಕರಣದ ಕುರಿತು The Quint ಮಾಡಿರುವ ವರದಿಯನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ನಾನು ಹಿಜಾಬ್ ಧರಿಸಿ ವಿಧಾನಸಭೆಗೆ ಬರಬಹುದಾದರೆ, ಅವರು ಕಾಲೇಜಿಗೇಕೆ ಹೋಗಬಾರದು?: ಶಾಸಕಿ ಕನೀಝ್ ಫಾತಿಮಾ 

ಶಾರ್ಜಾ ಮೂಲದ ಪ್ರತಿಷ್ಟಿತ ಕಾಸಿಮಿ ರಾಜಮನೆತನಕ್ಕೆ ಸೇರಿರುವ ಹೆಂದ್‌, ತಮ್ಮ ಅಧಿಕೃತ ಇನ್ಸ್ಟಗ್ರಾಮ್‌ ಖಾತೆಯಿಂದ ಕ್ವಿಂಟ್‌ ವರದಿಯನ್ನು ಹಂಚಿಕೊಂಡಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News