ಜಮ್ಮು-ಕಾಶ್ಮೀರ, ದಿಲ್ಲಿ ಅಕ್ಕಪಕ್ಕದಲ್ಲಿ ಭೂಕಂಪನ
Update: 2022-02-05 10:11 IST
ಹೊಸದಿಲ್ಲಿ: ಇಂದು ಬೆಳಗ್ಗೆ ಜಮ್ಮು ಹಾಗೂ ಕಾಶ್ಮೀರದಲ್ಲಿ ಕಂಪನದ ಅನುಭವವಾಗಿದೆ. ಕನಿಷ್ಠ 20 ಸೆಕೆಂಡುಗಳ ಕಾಲ ಭೂಮಿ ಕಂಪಿಸಿತು ಎಂದು ನಿವಾಸಿಗಳು ತಿಳಿಸಿದ್ದಾರೆ.
ಉತ್ತರ ಪ್ರದೇಶದ ನೋಯ್ಡಾ, ದಿಲ್ಲಿ ಸಮೀಪದ ನಿವಾಸಿಗಳು ಕೂಡ ಭೂಕಂಪದ ಬಗ್ಗೆ ಟ್ವೀಟ್ ಮಾಡಿದ್ದಾರೆ.
"ನನ್ನ ತಲೆ ಸುತ್ತುತ್ತಿದೆ ಎಂದು ನಾನು ಭಾವಿಸಿದ್ದೆ ಹಾಗೂ ನನ್ನ ಕಣ್ಣುಗಳನ್ನು ಮುಚ್ಚಲು ಆರಂಭಿಸಿದೆ, ಇದ್ದಕ್ಕಿದ್ದಂತೆ ನಾನು ಫ್ಯಾನ್ ಅನ್ನು ನೋಡಿದಾಗ ಅದು ಭೂಕಂಪವಾಗಿದೆ ಎಂದು ಅರಿತುಕೊಂಡೆ. ನೋಯ್ಡಾದಲ್ಲಿ ಸುಮಾರು 25-30 ಸೆಕೆಂಡುಗಳ ಕಾಲ ಬಲವಾದ ಕಂಪನಗಳು ಸಂಭವಿಸಿದವು" ಎಂದು ದಿಲ್ಲಿಯ ಪಕ್ಕದ ನಗರದ ನಿವಾಸಿ ಶಶಾಂಕ್ ಸಿಂಗ್ ಟ್ವೀಟ್ ಮಾಡಿದ್ದಾರೆ.