×
Ad

ತೇಜಸ್ವಿ ಯಾದವ್ ಆರ್‌ಜೆಡಿ ಮುಖ್ಯಸ್ಥರಾಗುತ್ತಾರೆಂಬ ವರದಿಗೆ ಲಾಲು ಯಾದವ್ ಹೇಳಿದ್ದೇನು?

Update: 2022-02-05 13:08 IST

ಹೊಸದಿಲ್ಲಿ: ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖ್ಯಸ್ಥ  ಸ್ಥಾನದಿಂದ ತಾನು ಕೆಳಗಿಳಿಯುತ್ತೇನೆ ಹಾಗೂ ತನ್ನ  ಪುತ್ರ ತೇಜಸ್ವಿ ಯಾದವ್ ಪಕ್ಷದ ಮುಂದಿನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಬಹುದು ಎಂಬ ಊಹಾಪೋಹವನ್ನು ಲಾಲು ಪ್ರಸಾದ್ ಯಾದವ್ ಅವರು ಶುಕ್ರವಾರ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.

ತೇಜಸ್ವಿ ಯಾದವ್ ಅವರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಲಾಗುತ್ತದೆಯೇ ಎಂಬ ಪ್ರಶ್ನೆಗೆ ಹೊಸದಿಲ್ಲಿಯಲ್ಲಿ  ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಲಾಲು ಯಾದವ್, "ಇಂತಹ ಸುದ್ದಿ ವರದಿಗಳನ್ನು ಮಾಡುವವರು ಮೂರ್ಖರು'' ಎಂದರು.

ಶುಕ್ರವಾರದಂದು ಆರ್‌ಜೆಡಿ ನಾಯಕ ತೇಜ್ ಪ್ರತಾಪ್ ಯಾದವ್ ಕೂಡ  ತೇಜಸ್ವಿ ಯಾದವ್ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡುತ್ತಾರೆಂಬ ವರದಿಯನ್ನು  ತಳ್ಳಿಹಾಕಿದರು. ಲಾಲು ಪ್ರಸಾದ್ ಯಾದವ್ ಅವರು ಪಕ್ಷವನ್ನು ಚೆನ್ನಾಗಿ ನಡೆಸುತ್ತಿರುವುದರಿಂದ  ಅವರು ಅಧ್ಯಕ್ಷರಾಗಿ ಉಳಿಯುತ್ತಾರೆ ಎಂದು ಹೇಳಿದರು.

ಮುಂಬರುವ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪಕ್ಷ ಸಂಘಟನೆಗೆ ಸಂಬಂಧಿಸಿದ ಹಲವು ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಆದರೆ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಭಾಗವಹಿಸುವುದನ್ನು ಅವರು ಖಚಿತಪಡಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News