ಸಂಘಪರಿವಾರದ ನಾಯಕರ ವಿರುದ್ಧ ಕ್ರಮಕ್ಕೆ ಸಿಎಫ್‌ಐ ಆಗ್ರಹ
Update: 2022-02-05 18:31 IST
ಕುಂದಾಪುರ, ಫೆ.5: ಶಾಂತಿಯುತವಾಗಿದ್ದ ಕುಂದಾಪುರದಲ್ಲಿ ವಿದ್ಯಾರ್ಥಿಗಳನ್ನು ಬಳಸಿಕೊಂಡು, ಶೈಕ್ಷಣಿಕ ವಾತಾವರಣ ಹದೆಗೆಡಿಸುತ್ತಾ ಅಶಾಂತಿ ಸೃಷ್ಠಿಸಲು ಸಂಘಪರಿವಾರ ಯತ್ನಿಸುತ್ತಿದೆ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕುಂದಾಪುರ ಸಮಿತಿಯ ತೀವ್ರವಾಗಿ ಖಂಡಿಸಿದೆ.
ಎಂದಿನಂತೆ ಕಾಲೇಜಿಗೆ ಶಿರವಸ್ತ್ರ ಧರಿಸಿ ಬಂದ ವಿದ್ಯಾರ್ಥಿನಿಯರನ್ನು ಗೇಟಿನ ಬಳಿಯೇ ತಡೆದು ಸಂಘಪರಿವಾರದ ಕೈಗೊಂಬೆಯಂತೆ ವರ್ತಿಸುತ್ತಿರುವ ಕುಂದಾಪುರದ ಸರಕಾರಿ ಕಾಲೇಜಿನ ಪ್ರಾಂಶುಪಾಲರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿನಿಯರಿಗೆ ಸಂವಿಧಾನ ಬದ್ಧ ಹಕ್ಕನ್ನು ಖಾತರಿಪಡಿಸಿ, ಶಿರವಸ್ತ್ರದೊಂದಿಗೆ ತರಗತಿಗೆ ಅನುಮತಿಸಿ ಯಥಾಸ್ಥಿತಿ ಕಾಪಾಡಿಕೊಳ್ಳಬೇಕು ಹಾಗೂ ವಿದ್ಯಾರ್ಥಿಗಳ ಮಧ್ಯೆ ಕೋಮುವಿಷಬೀಜ ಭಿತ್ತಿದ ಸಂಘಪರಿವಾರದ ನಾಯಕರ ಮೇಲೆ ಜಿಲ್ಲಾಡಳಿತ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಸಿಎಫ್‌ಐ ಕುಂದಾಪುರ ಅಧ್ಯಕ್ಷ ಮುಜಾಹಿದ್ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.