ಹಿಟ್ ಆ್ಯಂಡ್ ರನ್ : ಪಾದಚಾರಿ ಮೃತ್ಯು
Update: 2022-02-06 22:03 IST
ಕಾಪು, ಫೆ.6: ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮೂಡಬೆಟ್ಟು ಗ್ರಾಮದ ಎಚ್.ಎಸ್.ಎಂ. ಸ್ಟೀಲ್ ಫರ್ನಿಚರ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಫೆ.5ರಂದು ರಾತ್ರಿ ವೇಳೆ ನಡೆದಿದೆ.
ಮೃತರನ್ನು ಪಾಂಗಾಳ ಗ್ರಾಮದ ಆರ್ಯಾಡಿ ನಿವಾಸಿ ರಾಜು ಪೂಜಾರಿ(64) ಎಂದು ಗುರುತಿಸಲಾಗಿದೆ. ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಅಪರಿಚಿತ ವಾಹನವೊಂದು ಹೆದ್ದಾರಿ ಬದಿಯ ಮಣ್ಣು ರಸ್ತೆಯಲ್ಲಿ ಪಾಂಗಾಳದ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ರಾಜು ಪೂಜಾರಿಗೆ ಢಿಕ್ಕಿ ಹೊಡೆಯಿತ್ತೆನ್ನ ಲಾಗಿದೆ. ಬಳಿಕ ವಾಹನ ನಿಲ್ಲಿಸದೇ ಪರಾರಿಯಾಯಿತು.
ಇದರ ಪರಿಣಾಮ ಗಂಭೀರವಾಗಿ ಗಾಯಗೊಂಡ ರಾಜು ಪೂಜಾರಿ ಉಡುಪಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.