5ಜಿ ನೆಟ್ವರ್ಕ್ ಅಭಿವೃದ್ಧಿಯ ಅಂತಿಮ ಹಂತದಲ್ಲಿದೆ: ಸಚಿವ
Update: 2022-02-09 00:10 IST
ಹೊಸದಿಲ್ಲಿ,ಫೆ.8: ದೇಶದಲ್ಲಿ ಐಜಿ ನೆಟ್ವರ್ಕ್ ಅಭಿವೃದ್ಧಿಯ ಅಂತಿಮ ಹಂತದಲ್ಲಿದೆ ಎಂದು ಕೇಂದ್ರ ದೂರಸಂಪರ್ಕ,ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ ಅವರು ಮಂಗಳವಾರ ತಿಳಿಸಿದರು.
‘ಇಂಡಿಯಾ ಟೆಲಿಕಾಂ 2022’ಬಿಜಿನೆಸ್ ಎಕ್ಸ್ಪೋದಲ್ಲಿ ಮಾತನಾಡಿದ ಅವರು,ಭಾರತವು ಪ್ರಮುಖ ವಿದ್ಯುನ್ಮಾನ ತಯಾರಿಕೆ ಕೇಂದ್ರವಾಗಿ ಹೊಮ್ಮಿದೆ. ದೇಶವು ತನ್ನದೇ ಆದ 4ಜಿ ಕೋರ್ ಮತ್ತು ರೇಡಿಯೊ ನೆಟ್ವರ್ಕ್ ಅನ್ನೂ ಅಭಿವೃದ್ಧಿಗೊಳಿಸಿದೆ. 5ಜಿ ನೆಟ್ವರ್ಕ್ ಅಭಿವೃದ್ಧಿಯ ಅಂತಿಮ ಹಂತದಲ್ಲಿದೆ. ದೇಶವು ಇಂದು 6ಜಿ ಮಾನದಂಡಗಳ ಅಭಿವೃದ್ಧಿಯಲ್ಲಿ ಮತ್ತು 6ಜಿ ಚಿಂತನೆ ಪ್ರಕ್ರಿಯೆಯಲ್ಲಿಯೂ ಭಾಗಿಯಾಗುತ್ತಿದೆ ಎಂದರು.