×
Ad

ಏನನ್ನು ಧರಿಸಬೇಕೆಂದು ನಿರ್ಧರಿಸುವ ಹಕ್ಕು ಮಹಿಳೆಯರಿಗಿದೆ, ಕಿರುಕುಳ ನಿಲ್ಲಿಸಿ: ಹಿಜಾಬ್ ವಿವಾದದ ಕುರಿತು ಪ್ರಿಯಾಂಕ

Update: 2022-02-09 11:15 IST
ಪ್ರಿಯಾಂಕ ಗಾಂಧಿ ವಾದ್ರಾ (PTI)

ಹೊಸದಿಲ್ಲಿ: "ಅದು ಬಿಕಿನಿಯಾಗಿರಬಹುದು, ಗೂಂಘಟ್ ಆಗಿರಬಹುದು, ಜೀನ್ಸ್ ಆಗಿರಬಹುದು ಅಥವಾ 'ಹಿಜಾಬ್' ಆಗಿರಬಹುದು, ಏನನ್ನು ಧರಿಸಬೇಕೆಂದು ನಿರ್ಧರಿಸುವ ಹಕ್ಕು ಮಹಿಳೆಯರಿಗಿದೆ,'' ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಅವರು ಕರ್ನಾಟಕದ ಕಾಲೇಜುಗಳಲ್ಲಿ ಎದ್ದಿರುವ ಹಿಜಾಬ್ ವಿವಾದದ ಕುರಿತು ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿದ ಪ್ರಿಯಾಂಕ "ಈ ಹಕ್ಕನ್ನು ಮಹಿಳೆಯರಿಗೆ ಭಾರತದ ಸಂವಿಧಾನ ಖಾತ್ರಿಪಡಿಸಿದೆ, ಮಹಿಳೆಯರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಿ,'' ಎಂದು ಬರೆದಿರುವ ಪ್ರಿಯಾಂಕ ಜತೆಗೆ `ಲಡ್ಕೀಹೂಂಲಡ್‍ಸಕ್ತೀಹೂಂ' ಹ್ಯಾಶ್ ಟ್ಯಾಗ್ ಬಳಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News