ದೇಶದಲ್ಲಿ ಕಳೆದ 5 ವರ್ಷಗಳಲ್ಲಿ 655 ಪೊಲೀಸ್ ಎನ್‍ಕೌಂಟರ್ ಪ್ರಕರಣಗಳು: ಕೇಂದ್ರ ಸರಕಾರ

Update: 2022-02-09 12:59 GMT
ಸಾಂದರ್ಭಿಕ ಚಿತ್ರ

 ಹೊಸದಿಲ್ಲಿ: ಕಳೆದ ಐದು ವರ್ಷಗಳಲ್ಲಿ ದೇಶದ ವಿವಿಧೆಡೆಗಳಲ್ಲಿ ಒಟ್ಟು 655 ಪೊಲೀಸ್ ಎನ್‍ಕೌಂಟರ್ ಪ್ರಕರಣಗಳು ನಡೆದಿವೆ. ಗರಿಷ್ಠ 191 ಪ್ರಕರಣಗಳು ಛತ್ತೀಸಗಢದಿಂದ ವರದಿಯಾಗಿವೆ ಎಂದು ಕೇಂದ್ರ ಗೃಹ ರಾಜ್ಯ ಸಚಿವ ನಿತ್ಯಾನಂದ ರೇ ಲೋಕಸಭೆಯಲ್ಲಿ ಬಿಜೆಪಿ ಸಂಸದ ವರುಣ್ ಗಾಂಧಿ ಅವರ ಪ್ರಶ್ನೆಗೆ ಉತ್ತರಿಸುವ ವೇಳೆ ತಿಳಿಸಿದ್ದಾರೆ.

ಜನವರಿ 1, 2017 ಮತ್ತು ಜನವರಿ 31, 2022ರ ನಡುವೆ ಉತ್ತರ ಪ್ರದೇಶದಲ್ಲಿ 117 ಪ್ರಕರಣಗಳು ವರದಿಯಾಗಿದ್ದರೆ, ಅಸ್ಸಾಂನಲ್ಲಿ 50, ಜಾರ್ಖಂಡ್‍ನಲ್ಲಿ 49, ಒಡಿಶಾದಲ್ಲಿ 36, ಜಮ್ಮು ಕಾಶ್ಮೀರದಲ್ಲಿ 35 ಮತ್ತು ಮಹಾರಾಷ್ಟ್ರದಲ್ಲಿ 26 ಪ್ರಕರಣಗಳು ವರದಿಯಾಗಿವೆ.

ಇತರ ರಾಜ್ಯಗಳ ಪೈಕಿ ಬಿಹಾರದಲ್ಲಿ 22 ಪ್ರಕರಣಗಳು, ಹರ್ಯಾಣಾದಲ್ಲಿ 15, ತಮಿಳುನಾಡಿನಲ್ಲಿ 14, ತೆಲಂಗಾಣ, ಮಧ್ಯಪ್ರದೇಶ ಮತ್ತು ಅರುಣಾಚಲ ಪ್ರದೇಶದಲ್ಲಿ ತಲಾ 13, ಆಂಧ್ರಪ್ರದೇಶ ಮತ್ತು ಮೇಘಾಲಯದಲ್ಲಿ ತಲಾ 9 ಮತ್ತು ರಾಜಸ್ಥಾನ ಹಾಗೂ ದಿಲ್ಲಿಯಲ್ಲಿ ತಲಾ 8 ಪ್ರಕರಣಗಳು ವರದಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News