×
Ad

ಇಸ್ರೇಲ್‌ನ ಕ್ಷಿಪಣಿಗಳನ್ನು ಹೊಡೆದುರುಳಿಸಿದ ಸಿರಿಯಾ: ವರದಿ

Update: 2022-02-09 23:42 IST

ದಮಾಸ್ಕಸ್, ಫೆ.9: ರಾಜಧಾನಿ ದಮಾಸ್ಕಸ್‌ನ ಸುತ್ತಮುತ್ತ ಇಸ್ರೇಲ್‌ನ ಹಲವು ಆಕ್ರಮಣಕಾರಿ ಕ್ಷಿಪಣಿಗಳನ್ನು ಸಿರಿಯಾದ ವಾಯು ರಕ್ಷಣಾ ವಿಭಾಗ ಹೊಡೆದುರುಳಿಸಿದೆ ಎಂದು ಸಿರಿಯಾದ ಸರಕಾರಿ ಸ್ವಾಮ್ಯದ ಟಿವಿ ವಾಹಿನಿ ಬುಧವಾರ ಹೇಳಿದೆ.

ಸಿರಿಯಾದ ವಾಯು ರಕ್ಷಣಾ ವಿಭಾಗ ದಮಾಸ್ಕಸ್ ಅನ್ನು ಗುರಿಯಾಗಿಸಿ ನಡೆದ ಆಕ್ರಮಣವನ್ನು ಹಿಮ್ಮೆಟ್ಟಿಸಿದೆ. ಹಾನಿ ಅಥವಾ ಸಾವು ನೋವುಗಳ ಬಗ್ಗೆ ತಕ್ಷಣದ ಮಾಹಿತಿಯಿಲ್ಲ ಎಂದು ಟಿವಿ ವಾಹಿನಿಯ ವರದಿ ಹೇಳಿದೆ.

 ಈ ಮಧ್ಯೆ, ಇಸ್ರೇಲ್ ಕಡೆಗೆ ವಿಮಾನ ನಿರೋಧಕ ಕ್ಷಿಪಣಿಯನ್ನು ಹಾರಿಸಿದ ಹಿನ್ನೆಲೆಯಲ್ಲಿ, ಉತ್ತರ ಇಸ್ರೇಲ್ ನಲ್ಲಿ ರಾಕೆಟ್ ದಾಳಿಯ ಎಚ್ಚರಿಕೆ ಸೈರನ್ ಅನ್ನು ಬುಧವಾರ ಮೊಳಗಿಸಲಾಗಿದೆ. ಬಳಿಕ ಸಿರಿಯಾದ ಕ್ಷಿಪಣಿ ಉಡಾವಣಾ ವ್ಯವಸ್ಥೆ ಹಾಗೂ ರಾಡಾರ್ಗಳನ್ನು ಗುರಿಯಾಗಿಸಿ ತಾನು ಕ್ಷಿಪಣಿ ದಾಳಿ ನಡೆಸಿರುವುದಾಗಿ ಇಸ್ರೇಲ್ ನ ಸೇನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News