'ಮೀಡಿಯಾ ಒನ್' ವಾಹಿನಿ ಪ್ರಸಾರಕ್ಕೆ ನಿರ್ಬಂಧ : ಸಚಿವಾಲಯದ ಅಧಿಕಾರಿಗಳ ವಿಚಾರಣೆ ನಡೆಸಿದ ಸಂಸದೀಯ ಸಮಿತಿ

Update: 2022-02-10 18:55 GMT

ಹೊಸದಿಲ್ಲಿ, ಫೆ. 10 ಭದ್ರತಾ ಕಳವಳದ ಕುರಿತಂತೆ ಮಲೆಯಾಳಂ ಸುದ್ದಿ ವಾಹಿನಿ ಮೀಡಿಯಾ ಒನ್‌ನ ಪ್ರಸಾರ ಪರವಾನಿಗೆ ರದ್ದತಿಯ ಕುರಿತಂತೆ ಗೃಹ ಸಚಿವಾಲಯ, ಮಾಹಿತಿ ಹಾಗೂ ಪ್ರಸಾರ ಸಚಿವಾಲಯದ ಅಧಿಕಾರಿಗಳನ್ನು ಸಂಸದೀಯ ಸಮಿತಿ ಬುಧವಾರ ವಿಚಾರಣೆಗೆ ಒಳಪಡಿಸಿದ ಕಾಂಗ್ರೆಸ್ ನಾಯಕ ಶಶಿ ತರೂರ್‌ ನೇತೃತ್ವದ ಸಂವಹನ ಹಾಗೂ ಮಾಹಿತಿ ತಂತ್ರಜ್ಞಾನದ ಕುರಿತ ಸ್ಥಾಮಿ ಸಮಿತಿ ಕೇಂದ್ರ ಗೃಹ ಸಚಿವಾಲಯದ ವಿಶೇಷ ಕಾರ್ಯದರ್ಶಿ (ಅಂತರಿಕ ಭದ್ರತೆ) ವಿ.ಎಸ್.ಕೆ. ಕೌಮುದಿ ಮಾಹಿತಿ ಹಾಗೂ ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಅಪೂರ್ವ ಚಂದ್ರ ಅವರನ್ನು ಮೀಡಿಯಾ ಒನ್‌ ವಿವಾದದ ಕುರಿತಂತ ವಿಚಾರಣೆಗೆ ಒಳಪಡಿಸಿದ ಕೇಂದ್ರ ಗೃಹ ಸಚಿವಾಲಯ ಭದ್ರತಾ ಪರವಾನಿಗೆ ನೀಡಲು ನಿರಾಕರಿಸಿರುವುದನ್ನು ಉಲ್ಲೇಖಿಸಿ ಕೇಂದ್ರ ಮಾಹಿತಿ ಹಾಗೂ ಪ್ರಸಾರ ಸಚಿವಾಲಯ ಜನವರಿ 31ರಂದು 'ಮೀಡಿಯಾ ಒನ್' ವಾಹಿನಿಯನ್ನು ನಿರ್ವಹಿಸುತ್ತಿರುವ ಮಾಧ್ಯಮಂ ಬ್ರಾಡ್‌ಕಾಸ್ಟಿಂಗ್‌ ಲಿಮಿಟೆಡ್‌ಗೆ ನೀಡಿದ್ದ ಅಪ್‌ ಲಿಂಕ್ ಹಾಗೂ ಡೌನ್‌ಲಿಂಕ್ ಅನುಮತಿಯನ್ನು ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಮೀಡಿಯಾ ಒನ್' ವಾಹಿನಿ ಉಚ್ಚ ನ್ಯಾಯಾಲಯದ ಮೊರೆ ಹೋಗಿತ್ತು. ಮಂಗಳವಾರ ಹೈಕೋರ್ಟ್‌ನ ಏಕ ಸದಸ್ಯ ಪೀಠ ಕೇಂದ್ರ ಸರಕಾರದ ನಿರ್ಧಾರವನ್ನು ಎತ್ತಿ ಹಿಡಿದಿತ್ತು. ಈಗ ವಾಹಿನಿ ಹೈಕೋರ್ಟ್‌ನ ವಿಭಾಗೀಯ ಪೀಠದ ಮೆಟ್ಟಿಲೇರಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News