ಉಕ್ರೇನ್‍ನಿಂದ ತಕ್ಷಣ ಹೊರಡಿ ಎಂದು ತನ್ನ ನಾಗರಿಕರಿಗೆ ಹೇಳಿದ ಅಮೆರಿಕ ಅಧ್ಯಕ್ಷ ಬೈಡನ್

Update: 2022-02-11 08:51 GMT
ಅಮೆರಿಕ ಅಧ್ಯಕ್ಷ ಜೋ ಬೈಡನ್ (PTI)

ವಾಷಿಂಗ್ಟನ್: ಉಕ್ರೇನ್‍ನಲ್ಲಿರುವ ಅಮೆರಿಕಾದ ಪ್ರಜೆಗಳು ತಕ್ಷಣ ಅಲ್ಲಿಂದ ಹೊರಡಬೇಕೆಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ತಮ್ಮ ದೇಶದ ನಾಗರಿಕರನ್ನು ಆಗ್ರಹಿಸಿದ್ದಾರೆ. ಮಾಜಿ ಸೋವಿಯತ್ ರಾಜ್ಯವಾದ ಉಕ್ರೇನ್‍ನ ಸುತ್ತಲೂ ರಷ್ಯಾ ತನ್ನ ಸೇನೆಯ ನಿಯೋಜನೆಯನ್ನು ಇನ್ನಷ್ಟು ಹೆಚ್ಚಿಸಿರುವಂತೆಯೇ ಬೈಡನ್ ಅಲ್ಲಿರುವ ತಮ್ಮ ನಾಗರಿಕರಿಗೆ ಮೇಲಿನಂತೆ ಮನವಿ ಮಾಡಿದ್ದಾರೆ.

ಎನ್‍ಬಿಸಿ ನ್ಯೂಸ್ ಜತೆಗೆ ಮಾತನಾಡಿದ ಅವರ ಪೂರ್ವಮುದ್ರಿತ ಸಂದರ್ಶನದಲ್ಲಿ ಬೈಡೆನ್ ಅವರು "ಅಮೆರಿಕಾದ ನಾಗರಿಕರು ಈಗ ಹೊರಡಬೇಕು,'' ಎಂದು ಮನವಿ ಮಾಡಿದ್ದಾರೆ.

"ನಾವು ಜಗತ್ತಿನ ಅತ್ಯಂತ ದೊಡ್ಡ ಸೇನೆಯನ್ನು ನಿಭಾಯಿಸಬೇಕಿದೆ, ಇದೊಂದು ವಿಭಿನ್ನ ಪರಿಸ್ಥಿತಿ ಮತ್ತು ಈ ವಿಚಾರ ಶೀಘ್ರ ಕೆಟ್ಟದಾಗಬಹುದು,'' ಎಂದು ಹೇಳಿದ್ದಾರೆ.

"ಯಾವುದೇ ಸಂದರ್ಭದಲ್ಲಿ ಅಮೆರಿಕಾ ಪಡೆಗಳನ್ನು ಉಕ್ರೇನ್‍ಗೆ ಕಳುಹಿಸುವುದಿಲ್ಲ, ರಷ್ಯಾ ಆಕ್ರಮಣ ಮಾಡಿದರೆ ಅಮೆರಿಕನ್ನರ ರಕ್ಷಣೆಗೆಂದು ಸಹ ಸೇನೆಯನ್ನು ಕಳುಹಿಸುವುದಿಲ್ಲ ಹಾಗೇನಾದರೂ ಆದರೆ ಅದು ಜಾಗತಿಕ ಯುದ್ಧವಾಗುತ್ತದೆ. ಅಮೆರಿಕನ್ನರು ಮತ್ತು ರಷ್ಯನ್ನರು ಪರಸ್ಪರ ಗುಂಡಿಕ್ಕಲು ಪ್ರಾರಂಭಿಸಿದಾಗ ನಾವು ಬೇರೊಂದು ಜಗತ್ತಿನಲ್ಲಿರುತ್ತೇವೆ,'' ಎಂದು ಅವರು ಹೇಳಿದರು.

ಬೆಲಾರುಸ್ ಆಚೆಗೆ ರಷ್ಯಾ ತನ್ನ ಯುದ್ಧ ಟ್ಯಾಂಕ್‍ಗಳನ್ನು ಲೈವ್-ಫೈರ್ ಡ್ರಿಲ್‍ಗಳಿಗೆ ಕಳುಹಿಸಿ ನೇಟೋದಿಂದ ಎಚ್ಚರಿಕೆ ಪಡೆದ ನಂತರದ ಬೆಳವಣಿಗೆ ಇದಾಗಿದೆ. ಇದೊಂದು ಅಪಾಯಕಾರಿ ಕ್ಷಣ ಎಂದು ನ್ಯಾಟೋ ಈಗಾಗಲೇ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News