×
Ad

ಹಿಜಾಬ್‌ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಕಂಗನಾ ರಣಾವತ್‌ ಗೆ ಹಿರಿಯ ನಟಿ ಶಬಾನಾ ಅಝ್ಮಿ ತಿರುಗೇಟು

Update: 2022-02-11 17:12 IST
ಕಂಗನಾ ರಣಾವತ್‌ / ಶಬಾನಾ ಅಝ್ಮಿ (PTI)

ಹೊಸದಿಲ್ಲಿ: ಕರ್ನಾಟಕದಲ್ಲಿ ಭಾರೀ ವಿವಾದ ಸೃಷ್ಟಿಸಿರುವ ಹಿಜಾಬ್ (hijab) ಪ್ರಕರಣದ ಕುರಿತು ನಟಿ ಕಂಗನಾ ರಣಾವತ್ ನೀಡಿದ ಹೇಳಿಕೆಗೆ ಹಿರಿಯ ನಟಿ ಶಬಾನಾ ಅಝ್ಮಿ ತಿರುಗೇಟು ನೀಡಿದ್ದಾರೆ.

ಗುರುವಾರ ಕಂಗನಾ ಅವರು ಲೇಖಕ ಆನಂದ್ ರಂಗನಾಥನ್ ಅವರ ಪೋಸ್ಟ್ ಒಂದನ್ನು ಶೇರ್ ಮಾಡಿ "ನೀವು ನಿಮ್ಮ ಶೌರ್ಯ ತೋರಿಸಲು ಬಯಸಿದರೆ, ಅಫ್ಘಾನಿಸ್ತಾನದಲ್ಲಿ ಬುರ್ಖಾ ಧರಿಸದೇ ಇರುವ ಮೂಲಕ ತೋರಿಸಿ. ಸ್ವಚ್ಛಂದವಾಗಿರಲು ಕಲಿಯಿರಿ, ನಿಮ್ಮನ್ನು ಪಂಜರದಲ್ಲಿರಿಸಬೇಡಿ,'' ಎಂದು ಬರೆದಿದ್ದರು.

ಕಂಗನಾ ಅವರ ಪೋಸ್ಟ್ ನ ಒಂದು ತುಣುಕನ್ನು ಶುಕ್ರವಾರ ತಮ್ಮ ಅಧಿಕೃತ ಇನ್‍ಸ್ಟಾಗ್ರಾಂ ಪೋಸ್ಟ್ ನಲ್ಲಿ ಶೇರ್ ಮಾಡಿದ ಶಬಾನಾ, "ನಾನು ಹೇಳಿದ್ದು ತಪ್ಪಾಗಿದ್ದರೆ ಸರಿಪಡಿಸಿ, ಆದರೆ ಅಫ್ಘಾನಿಸ್ತಾನ ಒಂದು ಥಿಯೋಕ್ರೆಟಿಕ್ ದೇಶ ಹಾಗೂ ನಾನು ಕೊನೆಯ ಬಾರಿ ಪರಿಶೀಲಿಸಿದಾಗ ಭಾರತ ಒಂದು ಜಾತ್ಯತೀತ ಪ್ರಜಾಪ್ರಭುತ್ವ ಗಣರಾಜ್ಯವಾಗಿತ್ತು?!!'' ಎಂದು ಬರೆದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಒಬ್ಬರು "ನಮಗೆ ಜನರಿಗೆ ಬುದ್ಧಿ ಹೇಳಲು ಸಾಧ್ಯವಿಲ್ಲ, ಥ್ಯಾಂಕ್ಯೂ,'' ಎಂದು ಬರೆದಿದ್ದರೆ ಇನ್ನೊಬ್ಬರು "ಆಕೆಗೆ ಪ್ರಾಯಶಃ ವ್ಯತ್ಯಾಸದ ಬಗ್ಗೆ ತಿಳಿದಿಲ್ಲ,'' ಎಂದು ಬರೆದಿದ್ದಾರೆ. "ನಾವು ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಮಾತ್ರವಲ್ಲದೆ ಅತ್ಯಂತ ವೈವಿಧ್ಯಮಯ ದೇಶವಾಗಿದ್ದೇವೆ,'' ಎಂದು ಒಬ್ಬರು ಬರೆದಿದ್ದಾರೆ ಹಾಗೂ ಇನ್ನೊಬ್ಬರು "ಕಂಗನಾ ಅವರಿಂದ ಏನಾದರೂ ತಿಳುವಳಿಕೆಯುಳ್ಳ ವಿಚಾರವನ್ನು ನಿರೀಕ್ಷಿಸುವುದು ತಪ್ಪು,'' ಎಂದು ಹೇಳಿದ್ಧಾರೆ.

ಇದನ್ನೂ ಓದಿ: ಸಿಖ್ಖರ ಸಮವಸ್ತ್ರ, ರುಮಾಲುಗಳಿಗೆ ಸಮಸ್ಯೆಯಿಲ್ಲ, ಆದರೆ ಹಿಜಾಬ್‌ ಸಮಸ್ಯೆಯಾಗುವುದು ಹೇಗೆ?: ನಟಿ ಸೋನಂ ಕಪೂರ್ ಪ್ರಶ್ನೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News