ರಾಹುಲ್‌ ಗಾಂಧಿ ಜೊತೆ ʼಮುಸ್ಕಾನ್‌ ಖಾನ್‌ʼ ಎಂಬ ಸುಳ್ಳು ಮಾಹಿತಿ, ಫೋಟೊಗಳನ್ನು ಹಂಚುತ್ತಿರುವ ಬಲಪಂಥೀಯರು

Update: 2022-02-11 17:01 GMT
Photo: Twitter/screenshot

ಹೊಸದಿಲ್ಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹಾಗೂ ಜಾರ್ಖಂಡ್‌ ರಾಜ್ಯದ ಬಾರ್ಕಗಾಂವ್‌ ಶಾಸಕಿ ಅಂಬಾ ಪ್ರಸಾದ್ ಜೊತೆಗೆ ಇರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಈಗ ವ್ಯಾಪಕ ವೈರಲ್‌ ಮಾಡಲಾಗುತ್ತಿದ್ದು, ಶಾಸಕಿಯನ್ನು ಮಂಡ್ಯ ಪಿಇಎಸ್‌ ಕಾಲೇಜಿನಲ್ಲಿ ಕೇಸರಿಧಾರಿ ವಿದ್ಯಾರ್ಥಿಗಳ ಗುಂಪು ಜೈ ಶ್ರೀ ರಾಂ ಘೋಷಣೆಯೊಂದಿಗೆ ಎದುರಾದಾಗ ಆ ಗುಂಪನ್ನು ದಿಟ್ಟತನದಿಂದ ಎದುರಿಸಿದ್ದ ನೂರ್‌ ಮುಸ್ಕಾನ್‌ ಎಂದು ಪ್ರಚಾರ ಮಾಡಲಾಗುತ್ತಿದೆ. ಆದರೆ ಇದು ಸುಳ್ಳು ಪ್ರಚಾರವಾಗಿದೆ ಎಂದು thequint.com ವರದಿ ಮಾಡಿದೆ. 

ನೂರ್‌ ಮುಸ್ಕಾನ್‌ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಆಕೆ ವಿರುದ್ಧ ಬಲಪಂಥೀಯರು ಅಪಪ್ರಚಾರ ನಡೆಸುತ್ತಿದ್ದು, ಜೆಡಿಎಸ್‌ ಪದಾಧಿಕಾರಿ ನಜ್ಮಾ ನಝೀರ್‌ ಅವರ ಚಿತ್ರಗಳನ್ನು ಹಂಚಿ ʼಕಾಲೇಜಿನ ಹೊರಗೆ ಹಿಜಾಬ್‌ ಬೇಡ, ಕಾಲೇಜಿನಲ್ಲಿ ಮಾತ್ರ ಹಿಜಾಬ್‌ ಬೇಕುʼ ಎಂಬ ಒಕ್ಕಣೆಯೊಂದಿಗೆ ತಪ್ಪು ಮಾಹಿತಿಯನ್ನು ಹಂಚಲಾಗಿತ್ತು.

ಅದರ ಬೆನ್ನಲ್ಲೇ ಇದೀಗ, ರಾಹುಲ್‌ ಜೊತೆ ಕಾಣಿಸಿಕೊಂಡ ಶಾಸಕಿಯನ್ನು ನೂರ್‌ ಮುಸ್ಕಾನ್‌ ಎಂದು ಬಿಂಬಿಸಿ ವೈರಲ್‌ ಮಾಡಲಾಗುತ್ತಿದೆ. 

 ಶಾಸಕಿ ಅಂಬಾ ಪ್ರಸಾದ್‌ ಈ ಕುರಿತು ಸ್ಪಷ್ಟನೆ ನೀಡಿದ್ದು, ಈ ಚಿತ್ರದಲ್ಲಿರುವುದು ತಾನು. ಆದರೆ, ಕರ್ನಾಟಕದ ಬುರ್ಖಾಧಾರಿ ಹುಡುಗಿಯೆಂದು ಪ್ರಚಾರ ಮಾಡಲಾಗುತ್ತಿದೆ ಎಂದು ಟ್ವೀಟ್‌ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News