ತನ್ನ ಜಾಮೀನು ಆದೇಶ ಸರಿಪಡಿಸುವಂತೆ ಕೋರಿ ಹೈಕೋರ್ಟ್ ಮೊರೆ ಹೋದ ಕೇಂದ್ರ ಸಚಿವನ ಪುತ್ರ ಆಶಿಶ್ ಮಿಶ್ರಾ

Update: 2022-02-12 05:28 GMT

ಲಕ್ನೊ: ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿ ತನಗೆ ನೀಡಲಾಗಿರುವ ಜಾಮೀನು ಆದೇಶವನ್ನು ಸರಿಪಡಿಸುವಂತೆ ಕೋರಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಟೆನಿ ಅವರ ಪುತ್ರ ಆಶಿಶ್ ಮಿಶ್ರಾ ಶುಕ್ರವಾರ ಅಲಹಾಬಾದ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾನೆ.

ಆಶಿಶ್ ಮಿಶ್ರಾ ಹೈಕೋರ್ಟ್‌ನ ಲಕ್ನೋ ಪೀಠದ ಮೊರೆ ಹೋಗಿದ್ದು, ತನಗೆ ಜಾಮೀನು ಮಂಜೂರು ಮಾಡುವ ಹೈಕೋರ್ಟ್ ಆದೇಶದಲ್ಲಿ ಪ್ರಮಾದವಶಾತ್ ಉಲ್ಲೇಖಿಸದಿರುವ ಕೊಲೆಗೆ 302 ಹಾಗೂ ಕ್ರಿಮಿನಲ್ ಪಿತೂರಿಗಾಗಿ 120 ಬಿ ಸೆಕ್ಷನ್‌ಗಳನ್ನು ಸೇರಿಸಬೇಕೆಂದು ಕೋರಿದ್ದಾನೆ.

ಆಶಿಶ್ ವಿರುದ್ಧದ ಪ್ರಕರಣದ ದಂಡದ ಸೆಕ್ಷನ್‌ಗಳನ್ನು ಹೈಕೋರ್ಟ್ ಅಜಾಗರೂಕತೆ ಯಿಂದ ಕೈಬಿಟ್ಟಿರುವ ಕಾರಣ ಜೈಲು ಅಧಿಕಾರಿಗಳು ಆತನನ್ನು ಬಿಡುಗಡೆ ಮಾಡುವುದಿಲ್ಲ ಎಂದು ಆಶಿಶ್ ಪರ ವಕೀಲರು ಮನವಿ ಸಲ್ಲಿಸಿದರು.

ಆಶಿಶ್ ಸಲ್ಲಿಸಿರುವ ಅರ್ಜಿ ಮುಂದಿನ ವಾರ ವಿಚಾರಣೆಗೆ ಬರುವ ಸಾಧ್ಯತೆ ಇದೆ.

ನ್ಯಾಯಮೂರ್ತಿ ರಾಜೀವ್ ಸಿಂಗ್ ಅವರ ಪೀಠ ಗುರುವಾರ ಆಶಿಶ್ ಮಿಶ್ರಾ ಗೆ ಜಾಮೀನು ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News