×
Ad

ಹಿಜಾಬ್ ನಿಷೇಧ-ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆಯಾಗುತ್ತದೆ: ಹಿಜಾಬ್ ಪ್ರಕರಣದ ಕುರಿತು ಅಮೆರಿಕ

Update: 2022-02-12 10:55 IST
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಕರ್ನಾಟಕದಲ್ಲಿ ತಾರಕಕ್ಕೇರಿರುವ ಹಿಜಾಬ್(Hijab) ಪ್ರಕರಣದ ಕುರಿತು ಶುಕ್ರವಾರ ಪ್ರತಿಕ್ರಿಯಿಸಿರುವ ಯು.ಎಸ್. ಆಫೀಸ್ ಆಫ್ ಇಂಟರ್ ನ್ಯಾಷನಲ್ ರಿಲಿಜಿಯಸ್ ಫ್ರೀಡಂ (U.S. Office of International Religious Freedom(IRF)), ಹಿಜಾಬ್ ನಿಷೇಧವು "ಧಾರ್ಮಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ ಮತ್ತು ಮಹಿಳೆಯರು ಮತ್ತು ಬಾಲಕಿಯರನ್ನು ಪ್ರತ್ಯೇಕಿಸಿ ಗೌಣವಾಗಿಸುತ್ತದೆ,'' ಎಂದು ಹೇಳಿದೆ ಎಂದು thehindu.com ವರದಿ ಮಾಡಿದೆ.

ಈ ಕುರಿತು ಐಆರ್‍ಎಫ್ (IRF) ನ ಅಮೆರಿಕಾ ರಾಯಭಾರಿ ರಷದ್ ಹುಸೈನ್ ಟ್ವೀಟ್ ಮಾಡಿದ್ದಾರೆ. "ಧಾರ್ಮಿಕ ಸ್ವಾತಂತ್ರ್ಯವು ಒಬ್ಬರ ಧಾರ್ಮಿಕ ಉಡುಗೆಯನ್ನು ಆಯ್ಕೆ ಮಾಡುವ ಸಾಮರ್ಥ್ಯವನ್ನೂ ಒಳಗೊಂಡಿದೆ,'' ಎಂದು ಅವರು ಹೇಳಿದ್ದಾರಲ್ಲದೆ ಧಾರ್ಮಿಕ ಉಡುಗೆಗಳ ಅನುಮತಿಸುವಿಕೆಯ ಕುರಿತು ಕರ್ನಾಟಕ ನಿರ್ಧರಿಸಬಾರದು ಎಂದು ಹೇಳಿದ್ದಾರೆ.

ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಅಮೆರಿಕಾದ ಸೆಕ್ರಟರಿ ಆಫ್ ಸ್ಟೇಟ್ ಆಂಟನಿ ಬ್ಲಿಂಕೆನ್ ಅವರನ್ನು ಮೆಲ್ಬೋರ್ನ್‍ನಲ್ಲಿ ನಡೆದ ನಾಲ್ಕನೇ ಖ್ವಾಡ್ ಸಚಿವರ ಶೃಂಗಸಭೆಯಲ್ಲಿ ಭೇಟಿಯಾದ ಕೆಲವೇ ಘಂಟೆಗಳಲ್ಲಿ ಮೇಲಿನ ಹೇಳಿಕೆ ಬಂದಿದೆ.

ಜಗತ್ತಿನಾದ್ಯಂತ ಧಾರ್ಮಿಕ ಪ್ರಚೋದನೆ ಹೊಂದಿರುವ ನಿಂದನೆಗಳು, ಕಿರುಕುಳ ಮತ್ತು ತಾರತಮ್ಯ ಕುರಿತಾದ ಪ್ರಕರಣಗಳ ಮೇಲೆ ನಿಗಾ ಇಡುವ ಆಫೀಸ್ ಆಫ್ ಇಂಟರ್‍ನ್ಯಾಷನಲ್ ರಿಲಿಜಿಯಸ್ ಫ್ರೀಡಂ ಸಂಸ್ಥೆಯು ಅಮೆರಿಕಾ ಸರಕಾರದ ಸಂಸ್ಥೆಯಾಗಿದೆ.

ಇದನ್ನೂ ಓದಿ: ಸಿಎಎ ಪ್ರತಿಭಟನಾಕರರ ಆಸ್ತಿ ಮುಟ್ಟುಗೋಲು ಪ್ರಕ್ರಿಯೆ ಹಿಂಪಡೆಯುವಂತೆ ಆದಿತ್ಯನಾಥ್‌ ಸರ್ಕಾರಕ್ಕೆ ಸುಪ್ರೀಂ ತಾಕೀತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News