ಕತರ್ ಇಂಡಿಯನ್ ಸೋಷಿಯಲ್ ಫೋರಂ ವತಿಯಿಂದ ರಕ್ತದಾನ ಶಿಬಿರ

Update: 2022-02-12 10:21 GMT

ಕತರ್ : 'ಆಝಾದಿ ಕಾ ಅಮೃತ್ ಮಹೋತ್ಸವ್', ಕತರ್ ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ, ಕ್ಯೂಐಎಸ್ಎಫ್ ವತಿಯಿಂದ, ಹಮದ್ ಮೆಡಿಕಲ್ ಕಾರ್ಪೊರೇಷನ್ ನ ಸಹಯೋಗದೊಂದಿಗೆ, ಹಮದ್ ಆಸ್ಪತ್ರೆ ಯಲ್ಲಿರುವ ರಕ್ತದಾನ ಕೇಂದ್ರದಲ್ಲಿ  ಬೃಹತ್ ರಕ್ತದಾನ ಶಿಬಿರವನ್ನು ಶುಕ್ರವಾರ ಆಯೋಜಿಸಲಾಗಿತ್ತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಭಾರತೀಯ ರಾಯಭಾರಿ, ಡಾ. ದೀಪಕ್ ಮಿತ್ತಲ್ ರಕ್ತದಾನ ಶಿಬಿರದ ಉದ್ಘಾಟನೆ ನೆರವೇರಿಸಿದರು.

ರಕ್ತದಾನವು ಎಲ್ಲಕ್ಕಿಂತಲೂ ಮೇಲು. ರಕ್ತದಾನ ಮಾಡಲು ಪ್ರತಿಯೊಬ್ಬರೂ ಮುಂದೆ ಬರಬೇಕೆಂದು ಹೇಳುತ್ತಾ ಕತರ್ ಇಂಡಿಯನ್ ಸೋಷಿಯಲ್ ಫೋರಂ ಇದರ ಉದಾತ್ತ ಕಾರ್ಯಕ್ರಮವನ್ನು ಶ್ಲಾಘಿಸಿದರು.

ಅತಿಥಿಗಳಾಗಿ ಆಗಮಿಸಿದ್ದ ಹಮದ್ ಮೆಡಿಕಲ್ ಕಾರ್ಪೋರೇಷನ್  ಪಿಎಚ್ ಸಿಸಿ ರಾವ್ದತ್ ಅಲ್ ಖೈಲ್ ನ ಖ್ಯಾತ ವೈದ್ಯರಾದ ಡಾಕ್ಟರ್ ಅಮಿತ್ ವರ್ಮಾ, ಹಮದ್ ಮೆಡಿಕಲ್ ಆಸ್ಪತ್ರೆಯಲ್ಲಿ ಸೋಂಕು ನಿಯಂತ್ರಣಾ ವಿಭಾಗದ ಮುಖ್ಯಸ್ಥ ಡಾ. ಮೊಹಮ್ಮದ್ ರಹ್ಮಾತುಲ್ಲಾ ಶಫೀಖ್ ಮತ್ತು ಹಮದ್ ಮೆಡಿಕಲ್ ಕಾರ್ಪೋರೇಷನ್ ಅಲ್ ವಜ್ಬಾದ ಡಾ. ಬ್ರಿಯಾನ್ ಡೇವಿಡ್ ಓಕುಮು, ರಕ್ತದಾನದ ಮಹತ್ವ ಮತ್ತು ಅದರಿಂದಾಗುವ ಪ್ರಯೋಜನಗಳನ್ನು ವಿವರಿಸಿ, ರಕ್ತದಾನಿಗಳನ್ನು ಹುರಿದುಂಬಿಸಿದರು.

QISF ಅಧ್ಯಕ್ಷರಾದ ಆಯ್ಯೂಬ್ ಉಳ್ಳಾಲ್ ತಮ್ಮ ಅಧ್ಯಕ್ಷ ಭಾಷಣದಲ್ಲಿ ರಕ್ತದಾನದ ಮಹತ್ವ ಮತ್ತು ಅಗತ್ಯತೆಯ ಬಗ್ಗೆ ವಿವರಿಸಿದರು.

ಕಾರ್ಯಕ್ರಮದಲ್ಲಿ, ICC ಅಧ್ಯಕ್ಷರಾದ ಪಿ ಏನ್ ಬಾಬುರಾಜನ್, ಇಂಡಿಯನ್ ಸ್ಪೋರ್ಟ್ಸ್ ಸೆಂಟರ್ ನ ಅಧ್ಯಕ್ಷ ಡಾ.ಮೋಹನ್ ಥಾಮಸ್, ಸೌತ್ ಕೆನರಾ ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ನ ಅಧ್ಯಕ್ಷರಾದ ಅಬ್ದುಲ್ ಮಜೀದ್, QISF ನ ಪ್ರಧಾನ ಕಾರ್ಯದರ್ಶಿ, ಸಯೀದ್ ಕೋಮಾಚಿ, QISF ನ ಪದಾಧಿಕಾರಿಗಳು ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಶಿಬಿರದಲ್ಲಿ 232 ಮಂದಿ ನೋಂದಾಯಿಸಿದ್ದು , 173 ಮಂದಿ ರಕ್ತದಾನ ಮಾಡಿದರು.

QISFನ ಝಕರೀಯ ಪಾಂಡೇಶ್ವರ, ಇಬ್ರಾಹಿಂ UB, ಇರ್ಷಾದ್ ಕುಳಾಯಿ, ಅನ್ವರ್ ಅಂಗರಗುಂಡಿ, ಇಮ್ತಿಯಾಝ್ ಕಾರ್ನಾಡ್, ಖಾಲಿದ್ ಬೆಳಪು, ನಯೀಮ್ ಬೆಳಪು, ಅಶ್ರಫ್ ಗೇರುಕಟ್ಟೆ, ಇಮ್ರಾನ್ ಸುನ್ನತ್ ಕೆರೆ, ಇರ್ಫಾನ್ ಕಾಪು, ಶಫೀಕ್ ಪುತ್ತೂರು, ಮೊಹಮ್ಮದ್ ಶಾಫಿ ಕಾರ್ಕಳ, ಇರ್ಫಾನ್ ಅಡ್ಯಾರ್, ರಫೀಕ್ ಉಪ್ಪಿನಂಗಡಿ, ಇಬ್ರಾಹಿಂ ಸುಳ್ಯ, ಖಲಂದರ್ ಜಲಸೂರ್, ಸಫ್ವಾನ್ ಉಜಿರೆ, ಶಕೀಲ್ ಕೋಟೇಶ್ವರ, ಇಮ್ರಾನ್ ಮೂಡಬಿದ್ರೆ, ಅಶೀರ್ ಉಪ್ಪಿನಂಗಡಿ, ನಿಹಾಲ್ ಉಡುಪಿ, ತಬರೇಜ್ ಕಾಪು, ಹನೀಫ್ ಮೊಂಟೆಪಡಾವ್,  ರ್ಜುನೈದ್ ಕುಂಜತ್ತೂರ್, ಬಶೀರ್ ಮಾಚಂಪಾಡಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯದರ್ಶಿಗಳಾದ ಮೊಹಮ್ಮದ್ ಫಹದ್ ಸ್ವಾಗತಿಸಿದರು. ಆತಿಖ್ ಮಡಿಕೇರಿ ವಂದಿಸಿದರು. ಮೊಹಮ್ಮದ್ ಉಸ್ಮಾನ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News