ಬಜಾಜ್ ಗ್ರೂಪ್‌ನ ಮಾಜಿ ಅಧ್ಯಕ್ಷ, ಕೈಗಾರಿಕೋದ್ಯಮಿ ರಾಹುಲ್ ಬಜಾಜ್ ನಿಧನ
Update: 2022-02-12 16:18 IST
ಹೊಸದಿಲ್ಲಿ: ದೇಶದ ಖ್ಯಾತ ಉದ್ಯಮಿ ಮತ್ತು ಬಜಾಜ್ ಗ್ರೂಪ್‌ನ ಮಾಜಿ ಅಧ್ಯಕ್ಷ ರಾಹುಲ್ ಬಜಾಜ್ ಇಂದು ನಿಧನರಾದರು. ಅವರಿಗೆ 83 ವರ್ಷ ವಯಸ್ಸಾಗಿತ್ತು.
"ದಿವಂಗತ ರೂಪಾ ಬಜಾಜ್ ಅವರ ಪತಿ ಮತ್ತು ರಾಜೀವ್ / ದೀಪಾ, ಸಂಜೀವ್ / ಶೆಫಾಲಿ ಮತ್ತು ಸುನೈನಾ /ಮನೀಶ್ ಅವರ ತಂದೆ ರಾಹುಲ್ ಬಜಾಜ್ ಅವರ ನಿಧನದ ಬಗ್ಗೆ ನಾನು ತೀವ್ರ ದುಃಖದಿಂದ ತಿಳಿಸುತ್ತೇನೆ. ಅವರು ಫೆಬ್ರವರಿ 12 ರ ಮಧ್ಯಾಹ್ನ ಕುಟುಂಬಸ್ಥರ ಸಮ್ಮುಖದಲ್ಲಿ ನಿಧನರಾದರು." ಎಂದು ಬಜಾಜ್ ಗ್ರೂಪ್ ಅಧಿಕೃತ ಹೇಳಿಕೆ ನೀಡಿದೆ.
ರಾಹುಲ್ ಬಜಾಜ್ ಅವರಿಗೆ ನ್ಯುಮೋನಿಯಾ ಮತ್ತು ಹೃದಯ ಸಮಸ್ಯೆಯೂ ಇತ್ತು. ಕಳೆದ ಒಂದು ತಿಂಗಳಿನಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ರೂಬಿ ಹಾಲ್ ಕ್ಲಿನಿಕ್‌ನ ಮ್ಯಾನೇಜಿಂಗ್ ಟ್ರಸ್ಟಿ ಡಾ.ಪುರವೇಜ್ ಗ್ರಾಂಟ್ ಹೇಳಿದ್ದಾರೆ.