ಉಕ್ರೇನ್-ರಶ್ಯ ಗಡಿಯಲ್ಲಿ ಸೇನಾ ಉದ್ವಿಗ್ನತೆ ಉಲ್ಬಣ: ರಶ್ಯದಿಂದ ಉಕ್ರೇನ್ ನಲ್ಲಿನ ರಾಜತಾಂತ್ರಿಕ ಸಿಬ್ಬಂದಿಯ ತೆರವು
Update: 2022-02-12 23:00 IST
ಮಾಸ್ಕೊ, ಫೆ.12: ಉಕ್ರೇನ್ ಹಾಗೂ ರಶ್ಯ ಗಡಿಯಲ್ಲಿ ಸೇನಾ ಉದ್ವಿಗ್ನತೆಯ ನಡುವೆಯೇ, ರಶ್ಯ ಶನಿವಾರ ಉಕ್ರೇನ್ ನಲ್ಲಿರುವ ತನ್ನ ಕೆಲವು ರಾಜತಾಂತ್ರಿಕ ಸಿಬ್ಬಂದಿಯನ್ನು ಉಕ್ರೇನ್‌ನಿಂದ ತೆರವುಗೊಳಿಸಿದೆ. ನೆರೆ ರಾಷ್ಟ್ರವಾದ ಉಕ್ರೇನ್ ಮೇಲೆ ರಶ್ಯವು ದಾಳಿ ನಡೆಸುವ ಸಾಧ್ಯತೆ ದಟ್ಟವಾಗಿರುವಂತೆಯೇ ಈ ಬೆಳವಣಿಗೆಯುಂಟಾಗಿದೆ.
‘‘ಉಕ್ರೇನ್ ಆಡಳಿತ ಹಾಗೂ ಇತರ ರಾಷ್ಟ್ರಗಳಿಂದ ಪ್ರಚೋದನಕಾರಿ ಕ್ರಮಗಳು ನಡೆಯುವ ಸಾಧ್ಯತೆಯಿರುವುದರಿಂದ ಉಕ್ರೇನ್ನಲ್ಲಿರುವ ರಶ್ಯ ರಾಯಭಾರಿ ಕಚೇರಿ ಸಿಬ್ಬಂದಿಯನ್ನು ಕಡಿಮೆಗೊಳಿಸಲು ನಿರ್ಧರಿಸಲಾಗಿದೆಯೆಂದು ರಶ್ಯದ ವಿದೇಶಾಂಗ ವಕ್ತಾರ ಮಾರಿಯಾ ಝಖಾರೋವಾ ಪತ್ರಿಕಾ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.