ನೀವು ಪ್ರವಾಸ ಹೋಗುತ್ತಿದ್ದೀರೇ?: ರೈಲಿನಲ್ಲಿ ಸುರಕ್ಷಿತವಾಗಿ ಪ್ರಯಾಣಿಸಲು ಅನುಸರಿಸಬೇಕಾದ ಕ್ರಮಗಳು ಹೀಗಿವೆ...

Update: 2022-02-13 10:13 GMT
ಸಾಂದರ್ಭಿಕ ಚಿತ್ರ (PTI)

ಕೋವಿಡ್-19 ಪ್ರಕರಣಗಳ ಹಠಾತ್ ಉಲ್ಬಣದೊಂದಿಗೆ, ಹಲವಾರು ಪ್ರವಾಸಿ ತಾಣಗಳನ್ನು ಮುಚ್ಚಲಾಯಿತು. ಇದು ಪ್ರವಾಸೋದ್ಯಮದಲ್ಲಿ ಕುಂಠಿತಕ್ಕೆ ಕಾರಣವಾಯಿತು. ಈಗ ಕೋವಿಡ್ ಪ್ರಕರಣ ಕಡಿಮೆ ಆಗುತ್ತಿದ್ದಂತೆಯೇ ನಿಧಾನವಾಗಿ ಮತ್ತು ಸ್ಥಿರವಾಗಿ, ಪ್ರವಾಸೋದ್ಯಮ ತೆರೆದುಕೊಳ್ಳುತ್ತಿವೆ ಮತ್ತು ವಿವಿಧ ಸ್ಥಳಗಳಿಂದ ಪ್ರವಾಸಿಗರನ್ನು ಸ್ವೀಕರಿಸುತ್ತಿವೆ.

ಸುರಕ್ಷಿತ ಪ್ರಯಾಣಕ್ಕಾಗಿ ಪ್ರಯಾಣಿಕರು ಅನುಸರಿಸಬೇಕಾದ ಕ್ರಮಗಳನ್ನು IRCTC (ಭಾರತೀಯ ರೈಲ್ವೆ) ನೀಡಿದೆ. ಕ್ರಮಗಳು ಹೀಗಿವೆ:

►ದೃಢೀಕೃತ ಟಿಕೆಟ್‌ಗಳೊಂದಿಗೆ ಮಾತ್ರ ಪ್ರಯಾಣಿಸಲು ಪ್ರಯಾಣಿಕರಿಗೆ ಸೂಚಿಸಲಾಗಿದೆ.

►ಫೇಸ್ ಮಾಸ್ಕ್ ಮತ್ತು ಕೈ ನೈರ್ಮಲ್ಯವನ್ನು (ಕೈಗಳನ್ನು ಸರಿಯಾಗಿ ತೊಳೆಯುವುದು) ಅನುಸರಿಸುವುದು ಕಡ್ಡಾಯ.

► ಅಗತ್ಯ ಕೋವಿಡ್ ನಿಯಮಗಳನ್ನು ಪಾಲಿಸುವ ಸಲುವಾಗಿ ನಿರ್ಗಮನಕ್ಕೆ ಕನಿಷ್ಠ 90 ನಿಮಿಷಗಳ ಮೊದಲು ನಿಲ್ದಾಣವನ್ನು ತಲುಪಿ.

►ನಿಲ್ದಾಣದಲ್ಲಿ ಮತ್ತು ರೈಲಿನಲ್ಲಿ ಸುರಕ್ಷಿತ ಅಂತರವನ್ನು ಅನುಸರಿಸಬೇಕು.

►ನಿಲ್ದಾಣದಲ್ಲಿ ಪ್ರಯಾಣಿಕರು ಎಲ್ಲಾ ಸುರಕ್ಷತಾ ನಿಯಮ ನಿಬಂಧನೆಗಳನ್ನು ಅನುಸರಿಸಬೇಕು.

►ವೈರಸ್ ಹರಡುವುದನ್ನು ತಡೆಯಲು ಸದ್ಯ ರೈಲಿನಲ್ಲಿನ ಅಡುಗೆ ಸೇವೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.

►ಕೋವಿಡ್‌ ಕಾರಣದಿಂದಾಗಿ ಹೊದಿಕೆ, ಬೆಡ್‌ ಶೀಟ್‌ ಗಳನ್ನು ನೀಡಲಾಗುವುದಿಲ್ಲ (ಸಾಮಾನ್ಯವಾಗಿ ಎಸಿ ಕಂಪಾರ್ಟ್‌ ಮೆಂಟ್‌ ಗಳಲ್ಲಿ ಬೆಡ್‌ಶೀಟ್‌, ಹೊದಿಕೆ ಮತ್ತು ತಲೆದಿಂಬುಗಳನ್ನು ನೀಡಲಾಗುತ್ತಿತ್ತು.)

►ದೂರದ ರೈಲುಗಳು ವೇಳಾಪಟ್ಟಿಯ ಪ್ರಕಾರವೇ ಮುಂದುವರಿಯುತ್ತವೆ, ಆದರೆ ಸ್ಥಳೀಯ ರೈಲುಗಳು ತಮ್ಮ ಸಾಮರ್ಥ್ಯದ 50% ನೊಂದಿಗೆ ಕಾರ್ಯನಿರ್ವಹಿಸುತ್ತವೆ.

►ಕೆಲವು ರಾಜ್ಯಗಳು ಪ್ರಯಾಣಿಕರಿಂದ ನೆಗೆಟಿವ್ RT-PCR ಪರೀಕ್ಷೆಗೆ ಸೂಚಿಸಬಹುದು. ರೈಲಿನಲ್ಲಿ ಹತ್ತುವ ಮೊದಲು ಪ್ರಯಾಣಿಕರು ತಾವು ತೆರಳುವ ರಾಜ್ಯಗಳ ಪ್ರಯಾಣ ಮಾರ್ಗಸೂಚಿಗಳನ್ನು ಪರಿಶೀಲಿಸಿದ ಬಳಿಕವೇ ಹೋಗಬೇಕೆಂದು ಶಿಫಾರಸು ಮಾಡಲಾಗಿದೆ.

ಕೋವಿಡ್-19 ವ್ಯಾಕ್ಸಿನೇಷನ್ ನಂತರ ರೈಲುಗಳಲ್ಲಿ ಪ್ರಯಾಣಿಸುವುದು ಸುರಕ್ಷಿತವೇ?

IANS ಪ್ರಕಾರ, 1 ಶತಕೋಟಿಗೂ ಹೆಚ್ಚು ಜನರು ಈಗಾಗಲೇ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಇದು ಅನಾರೋಗ್ಯಕ್ಕೆ ಒಳಗಾಗುವ ಮತ್ತು ವೈರಸ್ ಅನ್ನು ಮತ್ತಷ್ಟು ಹರಡುವ ಸಾಧ್ಯತೆಗಳನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎನ್ನಲಾಗಿದೆ. ಆದರೆ ಯಾವುದೇ ಲಸಿಕೆಯು 100% ರಕ್ಷಣೆಯನ್ನು ಒದಗಿಸುವುದಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ, ಆದ್ದರಿಂದ ಕೋವಿಡ್‌ ನಿಯಮಗಳಿಗೆ ಬದ್ಧವಾಗಿರುವುದು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಉತ್ತಮ.

ಪ್ರಯಾಣ ಮಾಡುವಾಗ ಸುರಕ್ಷತಾ ಮುನ್ನೆಚ್ಚರಿಕೆಗಳೇನು?

ನೀವು ಪ್ರಯಾಣಿಸುವಾಗ ನೀವು ತೆಗೆದುಕೊಳ್ಳಬಹುದಾದ ಪ್ರಮಾಣಿತ ಮುನ್ನೆಚ್ಚರಿಕೆಗಳ  ಪಟ್ಟಿ ಹೀಗಿದೆ:

COVID-19 ವ್ಯಾಪಕವಾಗಿ ಹರಡಿರುವ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಗಳನ್ನು ಧರಿಸಿ. ಗಾಳಿ ಹರಡದ ದಟ್ಟಣೆಯ ಪ್ರದೇಶಗಳು ಮತ್ತು ನಿರ್ಬಂಧಿತ ಮತ್ತು ಇಕ್ಕಟ್ಟಿನ ಪರಿಸರಗಳಿಗೆ ತೆರಳುವುದನ್ನು ತಪ್ಪಿಸಿ.

ಅಗತ್ಯವಿದ್ದಾಗ ಸ್ಯಾನಿಟೈಝರ್‌ ಗಳನ್ನು ಬಳಸಿ.

ನೀವು ಹೊರಗೆ ತಿನ್ನಲು ಬಯಸಿದರೆ ಸುರಕ್ಷಿತ ಜಾಗಗಳನ್ನು ಪರಿಗಣಿಸಿ.  ಮುಚ್ಚಿದ ಜಾಗದಲ್ಲಿ ತಿನ್ನುವುದಕ್ಕಿಂತ ಹೊರಗಡೆ ಕುಳಿತು ತಿನ್ನುವುದು ಸುರಕ್ಷಿತವಾಗಿದೆ.  ನೀವು ತಿನ್ನುವ ಮೊದಲು, ಮಾಮೂಲಿನಂತೆ ನಿಮ್ಮ ಕೈಗಳನ್ನು ಸರಿಯಾಗಿ ತೊಳೆಯಲು ಅಥವಾ ಸ್ವಚ್ಛಗೊಳಿಸಲು ಮರೆಯದಿರಿ.

COVID ಪ್ರೋಟೋಕಾಲ್‌ಗಳು ಮತ್ತು ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲು ಸರ್ಕಾರವು ಶಿಫಾರಸು ಮಾಡಿದೆ.  ನೀವು ಯಾವುದೇ ರಾಜ್ಯಗಳಿಗೆ ರೈಲಿನ ಮೂಲಕ ಪ್ರಯಾಣಿಸಲು ನಿರ್ಧರಿಸಿದರೆ, ನಿಮ್ಮ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮೇಲಿನ ಮಾರ್ಗಸೂಚಿಗಳನ್ನು ಅನುಸರಿಸಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News