ಇಂಡೊನೇಶ್ಯಾ: ದಡಕ್ಕೆ ಅಪ್ಪಳಿಸಿದ ಬೃಹತ್ ಅಲೆ; ಕನಿಷ್ಟ 10 ಮಂದಿ ಮೃತ್ಯು‌

Update: 2022-02-13 18:22 GMT

ಜಕಾರ್ತ, ಫೆ.13: ಇಂಡೊನೇಶ್ಯಾದ ಪೂರ್ವ ಜಾವಾ ಪ್ರಾಂತದಲ್ಲಿ ರವಿವಾರ ಸಮುದ್ರದ ಬೃಹತ್ ಅಲೆಗಳು ಏಕಾಏಕಿ ದಡಕ್ಕೆ ನುಗ್ಗಿಬಂದಿದ್ದು ದಡದಲ್ಲಿ ಧ್ಯಾನ ಮಾಡುತ್ತಿದ್ದ ಕನಿಷ್ಟ 10 ಮಂದಿ ನೀರಿನಲ್ಲಿ ಕೊಚ್ಚಿಹೋಗಿದ್ದಾರೆ ಎಂದು ವರದಿಯಾಗಿದೆ.

ಪಯಾಂಗಾನ್ ಬೀಚ್ನಲ್ಲಿ ರವಿವಾರ ಬೆಳಗ್ಗೆ 23 ಮಂದಿಯ ತಂಡವೊಂದು ಪರಸ್ಪರ ಕೈಗಳನ್ನು ಹಿಡಿದುಕೊಂಡು ಧ್ಯಾನ ಮಾಡುತ್ತಿದ್ದರು. ಅವರು ಸಮುದ್ರದ ಅತ್ಯಂತ ಸನಿಹದಲ್ಲಿದ್ದರು. ಆಗ ಏಕಾಏಕಿ ಬೃಹತ್ ಅಲೆ ದಡಕ್ಕೆ ಅಪ್ಪಳಿಸಿದ್ದು ಅವರನ್ನು ಸಮುದ್ರದತ್ತ ಸೆಳೆದೊಯ್ದಿದೆ. ಗುಂಪಿನಲ್ಲಿದ್ದ 12 ಮಂದಿಯನ್ನು ರಕ್ಷಿಸಲಾಗಿದ್ದು 10 ಮಂದಿಯ ಮೃತದೇಹ ಪತ್ತೆಯಾಗಿದೆ. ಒಬ್ಬ ವ್ಯಕ್ತಿ ನಾಪತ್ತೆಯಾಗಿದ್ದಾನೆ ಎಂದು ಸ್ಥಳೀಯ ಪೊಲೀಸ್ ಮುಖ್ಯಸ್ಥ ಹೆರಿ ಪೂರ್ಣೊಮೊ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News