ಗೋವಾದಲ್ಲಿ ಹೆಚ್ಚಿನ ಮತದಾನ: ಆಡಳಿತ ವಿರೋಧಿ ಸಂದೇಶವಾಗಿದೆ ಎಂದ ಕಾಂಗ್ರೆಸ್

Update: 2022-02-15 04:45 GMT

ಪಣಜಿ: ಸೋಮವಾರ ನಡೆದ ಗೋವಾ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚಿನ ಮತದಾನವಾಗಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದೆ.

ಬಹುಕೋನ ಸ್ಪರ್ಧೆಗೆ ಸಾಕ್ಷಿಯಾದ ಗೋವಾ ರಾಜ್ಯದ ಯಾವುದೇ ಭಾಗದಿಂದ ಯಾವುದೇ ಅಹಿತಕರ ಘಟನೆಗಳು ವರದಿಯಾಗದೆ ಶಾಂತಿಯುತವಾಗಿ ಸೋಮವಾರ 40 ವಿಧಾನಸಭಾ ಸ್ಥಾನಗಳಿಗೆ ನಡೆದ ಮತದಾನದಲ್ಲಿ   ಶೇ.78.94 ರಷ್ಟು ಮತದಾನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ

ಮಾರ್ಚ್ 10 ರಂದು ಎಣಿಕೆಗಾಗಿ ತೆರೆಯಲಾಗುವ ಇವಿಎಂಗಳಲ್ಲಿ 301 ಅಭ್ಯರ್ಥಿಗಳ ಚುನಾವಣಾ ಭವಿಷ್ಯವನ್ನು ಲಾಕ್ ಮಾಡಲಾಗಿದೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮುಖ್ಯ ಚುನಾವಣಾಧಿಕಾರಿ ಕುನಾಲ್, ಉತ್ತರ ಗೋವಾದ ಸಂಖಾಲಿಮ್ ಕ್ಷೇತ್ರದಲ್ಲಿ ಅತಿ ಹೆಚ್ಚು ಶೇಕಡಾ 89.61 ರಷ್ಟು ಮತದಾನವಾಗಿದೆ. ಆದರೆ ದಕ್ಷಿಣ ಗೋವಾದ ಬೆನೌಲಿಮ್‌ನಲ್ಲಿ ಕಡಿಮೆ ಮತದಾನದ ಪ್ರಮಾಣ ಶೇಕಡಾ 70.20 ಆಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News