×
Ad

ಜಮ್ಮು ಕಾಶ್ಮೀರ ಪತ್ರಕರ್ತ ಫಹದ್ ಶಾ ಬಿಡುಗಡೆಗೆ 58 ಸಂಘಟನೆಗಳಿಂದ ಲೆಫ್ಟಿನೆಂಟ್ ಗರ್ವನರ್ ಗೆ ಪತ್ರ

Update: 2022-02-15 13:16 IST
Photo: Twitter/pzfahad

ಹೊಸದಿಲ್ಲಿ: ಕಾಶ್ಮೀರಿ ಪತ್ರಕರ್ತ ಫಹದ್ ಶಾ ಅವರ ಬಿಡುಗಡೆಗೆ ಆಗ್ರಹಿಸಿ 58 ಮಾಧ್ಯಮ ಸ್ವಾತಂತ್ರ್ಯ ಸಂಘಟನೆಗಳು, ಮಾನವ ಹಕ್ಕು ಸಂಘಟನೆಗಳು ಮತ್ತು ಮಾಧ್ಯಮ ಸಂಸ್ಥೆಗಳು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರಿಗೆ ಸೋಮವಾರ ಪತ್ರ ಬರೆದಿವೆ.

ಉಗ್ರ ಚಟುವಟಿಕೆಗಳನ್ನು ವೈಭವೀಕರಿಸಿದ್ದಾರೆ ಹಾಗೂ ಜನರನ್ನು ಪ್ರಚೋದಿಸಿದ್ದಾರೆ ಎಂದು ಆರೋಪಿ ಫೆಬ್ರವರಿ 4ರಂದು ಫಾಹದ್ ಅವರನ್ನು ಬಂಧಿಸಲಾಗಿತ್ತು. ಅವರು ಈ ಹಿಂದೆ ಎರಡು ಇತರ ಪ್ರಕರಣಗಳಲ್ಲಿಯೂ ಶಾಮೀಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಾ ಅವರ ವಿರುದ್ಧ ದೇಶದ್ರೋಹ ಕುರಿತೂ ತನಿಖೆ ನಡೆಸಲಾಗುತ್ತಿದೆ ಎಂದು ಎಫ್‍ಐಆರ್ ತಿಳಿಸಿದೆ ಹಾಗೂ ಅವರ ವಿರುದ್ಧ ಯುಎಪಿಎ ಅಡಿಯೂ ಪ್ರಕರಣ ದಾಖಲಾಗಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.

ಶಾ ಅವರೊಬ್ಬ ಉತ್ತಮ ಪತ್ರಕರ್ತ ಎಂದು ದಕ್ಷಿಣ ಏಷ್ಯಾದಾದ್ಯಂತ ತಿಳಿಯಲ್ಪಟ್ಟವರು ಅವರು ದಿ ನೇಷನ್ ಮ್ಯಾಗಜೀನ್‍ಗೆ  ಬರೆದ ಲೇಖನಕ್ಕಾಗಿ 2021 ಮಾನವ ಹಕ್ಕುಗಳ ಮಾಧ್ಯಮ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ. ಅವರು ಜಮ್ಮು ಕಾಶ್ಮೀರದಲ್ಲಿನ ಆಗುಹೋಗುಗಳನ್ನು ವರದಿ ಮಾಡಿರುವುದು ಒಂದು ಸಾರ್ವಜನಿಕ ಸೇವೆಯಾಗಿದೆಯೇ ಹೊರತು ಅಪರಾಧವಲ್ಲ, ಅವರನ್ನು  ಭಾರತೀಯ ಕಾನೂನಿನಡಿ ರಕ್ಷಿಸಬೇಕಿದೆ ಎಂದು ಪತ್ರದಲ್ಲಿ ಬರೆಯಲಾಗಿದೆಯಲ್ಲದೆ ಅವರ ತಕ್ಷಣ ಬಿಡುಗಡೆಗೆ ಆಗ್ರಹಿಸಲಾಗಿದೆ.

ಅಲಾಯನ್ಸ್ ಫಾರ್ ಎ ಸೆಕ್ಯುಲರ್ ಎಂಡ್ ಡೆಮಾಕ್ರೆಟಿಕ್ ಸೌತ್ ಏಷ್ಯಾ, ಅಂಬೇಡ್ಕರ್ ಕಿಂಗ್ ಸ್ಟಡಿ ಸರ್ಕಲ್, ಅಂಬೇಡ್ಕರ್ ಇಂಟರ್‍ನ್ಯಾಷನಲ್ ಸೆಂಟರ್, ಕಮಿಟಿ ಟು ಪ್ರೊಟೆಕ್ಟ್ ಜರ್ನಲಿಸ್ಟ್ಸ್,  ಕೌನ್ಸಿಲ್ ಆನ್ ಮೈನಾರಿಟಿ ರೈಟ್ಸ್ ಇನ್ ಇಂಡಿಯಾ ಮುಂತಾದ ಸಂಘಟನೆಗಳು ಈ ಪತ್ರ ಬರೆದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News