×
Ad

ಹಿಂದುತ್ವ ಕಾರ್ಯಕರ್ತರ ಪ್ರತಿಭಟನೆ ನಂತರ ಹಿಜಾಬ್ ನಿಷೇಧಿಸಿ ಆದೇಶ ಹೊರಡಿಸಿದ ಮಧ್ಯಪ್ರದೇಶದ ಸರಕಾರಿ ಕಾಲೇಜು

Update: 2022-02-15 20:42 IST

ಹೊಸದಿಲ್ಲಿ: ಮಧ್ಯಪ್ರದೇಶದ ದಟಿಯಾ ಜಿಲ್ಲೆಯಲ್ಲಿರುವ ಅಗ್ರಾಣಿ ಸರಕಾರಿ ಸ್ವಾಯತ್ತ ಪಿಜಿ ಕಾಲೇಜಿನ ಆಡಳಿತವು ಕಾಲೇಜು ಕ್ಯಾಂಪಸ್‍ನಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಫೆಬ್ರವರಿ 14, ಸೋಮವಾರ ಕಾಲೇಜಿಗೆ ಹಿಜಾಬ್ ಧರಿಸಿ ಇಬ್ಬರು ವಿದ್ಯಾರ್ಥಿನಿಯರು ಆಗಮಿಸಿದ್ದನ್ನು ವಿರೋಧಿಸಿ ಹಿಂದು ಬಲಪಂಥೀಯ ಸಂಘಟನೆಗಳು ಪ್ರತಿಭಟನೆ ನಡೆಸಿದ ನಂತರ ಮೇಲಿನ ಆದೇಶ ಹೊರಬಿದ್ದಿದೆ.

ಕಾಲೇಜು ಆವರಣಕ್ಕೆ ಇಬ್ಬರು ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರು ಪ್ರವೇಶಿಸುತ್ತಿದ್ದಂತೆಯೇ ಜನರ ಒಂದು ಗುಂಪು ಜೈ ಶ್ರೀ ರಾಮ್ ವಂದೇ ಮಾತರಂ ಘೋಷಣೆಗಳನ್ನು ಕೂಗುವುದನ್ನು ಆರಂಭಿಸಿದ ವೀಡಿಯೋವೊಂದು ಟ್ವಿಟ್ಟರ್‍ನಲ್ಲಿ ಹರಿದಾಡುತ್ತಿದೆ.

"ಇಲ್ಲಿಗೆ ಯಾವುದೇ ರೀತಿಯ ಧಾರ್ಮಿಕ ಉಡುಗೆ ಧರಿಸಿ ಯಾರೂ ಆಗಮಿಸುವಂತಿಲ್ಲ" ಎಂದು ಕಾಲೇಜು ಪ್ರಾಂಶುಪಾಲ ಡಿ.ಆರ್ ರಾಹುಲ್ ತಿಳಿಸಿದ್ದಾರೆ.

ಕಾಲೇಜಿನ ಆವರಣದಲ್ಲಿ ವಿಶ್ವ ಹಿಂದು ಪರಿಷದ್, ದುರ್ಗಾವಾಹಿನಿ ಮತ್ತು ಬಜರಂಗದಳಕ್ಕೆ ಸೇರಿದ ಯುವ ಕಾರ್ಯಕರ್ತರು ಸೋಮವಾರ  ಪ್ರತಿಭಟಿಸಿದ್ದರು.

ಮಧ್ಯ ಪ್ರದೇಶದ ಸತ್ನಾ ಎಂಬಲ್ಲಿನ ಸ್ವಾಯತ್ತ ಸರಕಾರಿ ಕಾಲೇಜಿನಲ್ಲಿ ಬುರ್ಖಾ ಮತ್ತು ಹಿಜಾಬ್ ಧರಿಸಿದ ಇಬ್ಬರು ವಿದ್ಯಾರ್ಥಿನಿಯರಿಂದ ಬಲವಂತದ ಕ್ಷಮಾಪಣೆ ಪತ್ರ ಬರೆಸಿದ ಘಟನೆ ಇತ್ತೀಚೆಗೆ ನಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News