×
Ad

ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ: ಯತಿ ನರಸಿಂಹಾನಂದ್‌ಗೆ ಜಾಮೀನು

Update: 2022-02-15 20:53 IST

ಹೊಸದಿಲ್ಲಿ: ಮಹಿಳೆಯರ ವಿರುದ್ಧ ಆಕ್ಷೇಪಾರ್ಹ ಮತ್ತು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ ಹಿಂದುತ್ವ ನಾಯಕ ಯತಿ ನರಸಿಂಹಾನಂದನಿಗೆ ಉತ್ತರಾಖಂಡದ ಹರಿದ್ವಾರದ ಸ್ಥಳೀಯ ನ್ಯಾಯಾಲಯವು ಫೆಬ್ರವರಿ 15 ರಂದು ಮಂಗಳವಾರ ಜಾಮೀನು ನೀಡಿದೆ. 

ಹರಿದ್ವಾರದ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಭರತ್ ಭೂಷಣ್ ಪಾಂಡೆ ಅವರು ಜನವರಿ 19 ರಂದು ಹರಿದ್ವಾರದ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (CJM) ನ್ಯಾಯಾಲಯವು ಜಾಮೀನು ನಿರಾಕರಿಸಿ ನೀಡಿದ್ದ ಹಿಂದಿನ ತೀರ್ಪನ್ನು ರದ್ದುಗೊಳಿಸಿದರು. 
ಜಾಮೀನು ನಿರಾಕರಿಸಿದ್ದರಿಂದ ನರಸಿಂಹಾನಂದ ಜನವರಿ 16 ರಿಂದ ನ್ಯಾಯಾಂಗ ಬಂಧನದಲ್ಲಿಯೇ ಇದ್ದ. 

ಹರಿದ್ವಾರದ ಧರ್ಮ ಸಂಸದ್ ಪ್ರಕರಣದಲ್ಲಿ ನರಸಿಂಹಾನಂದ ಈಗಾಗಲೇ ಜಾಮೀನು ಪಡೆದಿರುವುದರಿಂದ ಇನ್ನು ಆತ ಜೈಲಿನಿಂದ ಬಿಡುಗಡೆಯಾಗಲಿದ್ದಾನೆ ಎಂದು ವಕೀಲರು ತಿಳಿಸಿದ್ದಾರೆ. 

ಧರ್ಮ ಸಂಸದ್‌ನಲ್ಲಿ ಅವರು ನೀಡಿದ್ದ ಜನಾಂಗೀಯ ಧ್ವೇಷದ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಬಳಿಕ, ವಿವಿಧ ಕಾಯ್ದೆಯಡಿ ಪ್ರಕರಣ ದಾಖಲಿಸಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News