ಮಗು ಸಹಿತ ತಾಯಿ ನಾಪತ್ತೆ: ದೂರು
Update: 2022-02-16 22:06 IST
ಮಂಗಳೂರು, ಫೆ.16: ನಗರದ ಜಪ್ಪು ಎಂಪಸೀಸ್ ಫೆರಿ ರಸ್ತೆಯ ನಿವಾಸಿ ಮಮತಾ (22) ಎಂಬಾಕೆಯು ತನ್ನ ಮಗು ಸಂತೋಷ್ (14 ತಿಂಗಳು)ನೊಂದಿಗೆ ನಾಪತ್ತೆಯಾಗಿದ್ದಾರೆ ಎಂದು ಮಮತಾರ ಪತಿ ಪೊಲೀಸರಿಗೆ ದೂರು ನೀಡಿದ್ದಾರೆ.
ಮಮತಾರನ್ನು ಎರಡೂವರೆ ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದೆ. ಆದರೆ ಇದು ಮಮತಾಳ ತಂದೆ, ತಾಯಿಗೆ ಒಪ್ಪಿಗೆ ಇರಲಿಲ್ಲ. ಫೆ.3ರಂದು ಮಮತಾ ತನ್ನೊಂದಿಗೆ ಜಗಳವಾಡಿ ಮಗುವಿನೊಂದಿಗೆ ನಾಪತ್ತೆಯಾಗಿದ್ದಾರೆ ಎಂದು ಪಾಂಡೇಶ್ವರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.