ಕಿಶ್ವ ಇಂಟೆರ್ ಲೀಗ್ ಕ್ರಿಕೆಟ್ ಟೂರ್ನಮೆಂಟ್ : ಆಟಗಾರರ ಹರಾಜು ಪ್ರಕ್ರಿಯೆ

Update: 2022-02-17 01:20 GMT

ಜುಬೈಲ್: ಸೌದಿ ಅರೇಬಿಯಾದಲ್ಲಿ  ಕಾರ್ಯಾಚರಿಸುತ್ತಿರುವ  ಕಿಶ್ವ ಸಂಘಟನೆಯ ಅಧೀನದಲ್ಲಿ ಕಿಶ್ವ ಇಂಟೆರ್ ಲೀಗ್ ಕ್ರಿಕೆಟ್  ಪಂದ್ಯಾಟವು ಜರುಗಲಿದ್ದು, ಈ ಪ್ರಯುಕ್ತ  ಆಟಗಾರರ  ಹರಾಜು ಪ್ರಕ್ರಿಯು ಆಲ್ ಜುಬೈಲ್ ನ 'ಪುಲಿ' ರೆಸ್ಟಾರಂಟ್ ನ  ಸಭಾಂಗಣದಲ್ಲಿ  ಇತ್ತೀಚಿಗೆ ಜರುಗಿತು.

ಕಾರ್ಯಕ್ರಮವನ್ನು  ಉದ್ಘಾಟಿಸಿದ ಕಿಶ್ವ  ಅಧ್ಯಕ್ಷರಾದ  ಇಸ್ಮಾಯಿಲ್ NGC, ಅತ್ಯಂತ ಸೀಮಿತ ಸಮಯದಲ್ಲಿ ಪಂದ್ಯಾಟವನ್ನು ನೆರವೇರಿಸಲು ಉತ್ಸಾಹದಿಂದ ಕಾರ್ಯ ನಿರ್ವಹಿಸುತ್ತಿರುವ “ಕಿಲ್ (KIL)ಟೀಮ”ನ್ನು  ಅಭಿನಂದಿಸುತ್ತಾ, ಕಿಶ್ವ ಸಹೋದರರೆಲ್ಲರೂ ಈ ಪಂದ್ಯಾಟದ ಯಶಸ್ವಿಗಾಗಿ ಸಹಕರಿಸಬೇಕೆಂದು ಕರೆ ನೀಡಿದರು.

ಕಿಶ್ವ ಇದರ ಉಪಾಧ್ಯಕ್ಷರಾದ  ಮುಬೀನ್ ಮತ್ತು ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಅಲಿ ಹಾಗು  ಕಿಶ್ವ ಇಂಟೆರ್ ಲೀಗ್ ನ ಅಧ್ಯಕ್ಷರಾದ  ಶಬೀರ್ ಜಾಕ್ ಆಟಗಾರಿಗೆ ಮತ್ತು ತಂಡಗಳಿಗೆ ಶುಭ ಹಾರೈಸಿದರು.
ಮಾಸ್ಟರ್ ಮೊಹಮ್ಮೆದ್ ಮುಹೀದ್ ಕಿರಾಅತ್ ಪಠಿಸಿದರು.

ಕಬೀರ್ ಮತ್ತು ನೌಮಾನ್ ಮಾಲಕತ್ವದ 'ಲೆಜೆಂಡ್ಸ್', ಫೈಝಲ್FN ಮತ್ತು ರಹೂಫ್ ಮಾಲಕತ್ವದ 'ನೌಟಿಕಾ', ಮೋಹಿನ್ ಮತ್ತು ಖಲೀಲ್ ಮಾಲಕತ್ವದ 'ಪ್ಯಾಂಥರ್ಸ್', ಶಕೀಲ್ ವೆಲ್ಕಮ್ ಮತ್ತು ರಫೀಕ್ ಮಾಲಕತ್ವದ  'ವೆಲ್ಕಮ್ ಚಾಲೆಂಜರ್ಸ್', ಕಲಂದರ್ ಮತ್ತು ಅಶ್ರಫ್ ಮಾಲಕತ್ವದ 'ಅಯಿತಾನ್  ರೈಡರ್ಸ್', ಸಿಯಾನ್ ಮತ್ತು ಸರ್ಫ್ರಾಝ್ ಮಾಲಕತ್ವದ 'BK ವಾರಿಯರ್ಸ್' ಕ್ರಿಕೆಟ್ ತಂಡಗಳು ಈ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದವು.

ಹುರೈಸ್ ಕೃಷ್ಣಾಪುರ ಕಾರ್ಯಕ್ರಮ ನಿರೂಪಿಸಿದರು. ಸಫ್ವಾನ್ ಬಜ್ಪೆ ಹರಾಜು ಪ್ರಕ್ರಿಯೆ ನೆರೆವೇರಿಸಿದರು. ಇದೇ ಸಂದರ್ಭ 'ಕಿಲ್  ಟ್ರೋಫಿ'ಯನ್ನು ಅನಾವರಣಗೊಳಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News