​ದೇಶದಲ್ಲೇ ಅತ್ಯಧಿಕ ಹಣದುಬ್ಬರದ ರಾಜ್ಯ ಇದು...

Update: 2022-02-17 01:55 GMT
ಸಾಂದರ್ಭಿಕ ಚಿತ್ರ

ಡೆಹ್ರಾಡೂನ್: ಉತ್ತರಾಖಂಡದ ನಗರ ಪ್ರದೇಶಗಳು ದೇಶದಲ್ಲೇ ಗರಿಷ್ಠ ಎನಿಸಿದ ಶೇಕಡ 7.62ರಷ್ಟು ಹಣದುಬ್ಬರ ದರ ದಾಖಲಿಸಿವೆ ಎಂದು ನ್ಯಾಷನಲ್ ಸ್ಯಾಂಪಲ್ ಸರ್ವೆ ಆಫೀಸ್ (ಎನ್‌ಎಸ್‌ಎಸ್‌ಓ) ಪ್ರಕಟಿಸಿದೆ.

ಆದಾಗ್ಯೂ ಈ ಬೆಟ್ಟ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿನ ಹಣದುಬ್ಬರ ಪ್ರಮಾಣ ಶೇಕಡ 5.71ರಷ್ಟಿದೆ. ಬೆಲೆ ಏರಿಕೆ ಹಾಗೂ ಹಣದುಬ್ಬರ ಉತ್ತರಾಖಂಡ ವಿಧಾನಸಭಾ ಚುನಾವಣೆಯ ಪ್ರಮುಖ ವಿಷಯವಾಗಿತ್ತು.

"ರಾಜ್ಯದ ಹಾಗೂ ದೇಶದ ಜನತೆ ಹಣದುಬ್ಬರದ ಹೊಡೆತಕ್ಕೆ ಹೇಗೆ ತುತ್ತಾಗಿದ್ದಾರೆ ಎನ್ನುವುದನ್ನು ಕೇಂದ್ರ ಸರ್ಕಾರದ ಅಂಕಿ ಅಂಶಗಳೇ ದೃಢಪಡಿಸುತ್ತವೆ. ಬಿಜೆಪಿ ಸರ್ಕಾರದ ನೀತಿಗಳ ಸಂಕಷ್ಟವನ್ನು ಜನ ಎದುರಿಸುತ್ತಿದ್ದಾರೆ" ಎಂದು ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಟೀಕಿಸಿದ್ದಾರೆ.

ರಾಜ್ಯದ ಒಟ್ಟಾರೆ ಹಣದುಬ್ಬರ ದರ ಶೇಕಡ 6.38ರಷ್ಟಿದ್ದು, ದೇಶದಲ್ಲಿ ಶೇಕಡ 7.23 ಹಣದುಬ್ಬರ ಹೊಂದಿದ ಹರ್ಯಾಣ ಅಗ್ರಸ್ಥಾನಿಯಾಗಿದೆ. ಪಶ್ಚಿಮ ಬಂಗಾಳ (ಶೇಕಡ 7.11), ಜಮ್ಮು ಮತ್ತು ಕಾಶ್ಮೀರ (6.74), ತೆಲಂಗಾಣ ಮತ್ತು ಹಿಮಾಚಲ ಪ್ರದೇಶ (6.72), ಉತ್ತರ ಪ್ರದೇಶ (6.71), ಮಧ್ಯಪ್ರದೇಶ (6.52), ಮಹಾರಾಷ್ಟ್ರ (6.47), ಉತ್ತರಾಖಂಡ (6.38), ಕರ್ನಾಟಕ (6.20) ಮತ್ತು ಜಾರ್ಖಂಡ್ (6.19) ನಂತರದ ಸ್ಥಾನಗಳಲ್ಲಿವೆ.

ರಾಜ್ಯದ 70 ವಿಧಾನಸಭಾ ಸ್ಥಾನಗಳಿಗೆ ಮತದಾನ ಪ್ರಕ್ರಿಯೆ ಫೆಬ್ರುವರಿ 14ರಂದು ಪೂರ್ಣಗೊಂಡಿದ್ದು, ಶೇಕಡ 65.37ರಷ್ಟು ಮತದಾನವಾಗಿತ್ತು. ಹರಿದ್ವಾರದಲ್ಲಿ ಗರಿಷ್ಠ (ಶೇಕಡ 74.77) ಮತದಾನವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News