×
Ad

ಹಿರಿಯ ವಿದ್ವಾಂಸ ನರಸಿಂಹ ಭಟ್ ನಿಧನ

Update: 2022-02-19 14:56 IST

ಕಾಸರಗೋಡು, ಫೆ.19: ಹಿರಿಯ ವಿದ್ವಾಂಸ, ಶಿಕ್ಷಣ ತಜ್ಞ, ಭಾಷಾಂತರಕಾರ, ನಿವೃತ್ತ ಎ.ನರಸಿಂಹ ಭಟ್ (92) ಶನಿವಾರ ಮುಂಜಾನೆ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಮೂಲತಃ ಅಡ್ಯನಡ್ಕ ನಿವಾಸಿಯಾಗಿದ್ದ ನರಸಿಂಹ ಭಟ್ ಪ್ರಸ್ತುತ ಕಾಸರಗೋಡು ಕೋಟೆಕಣಿ ನರಸಿಂಹ ಭಟ್‌, ಮುಂದೆ ಅಧ್ಯಾಪಕರಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದರು.

ಉಪ ಜಿಲ್ಲಾ ಶಿಕ್ಷಣಾಧಿಕಾರಿಯಾಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ್ದರು. ಖ್ಯಾತ ಸಾಹಿತಿ ಹಾಗೂ ಶ್ರೇಷ್ಠ ಬರಹಗಾರರಾಗಿದ್ದ ಅವರು ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದರು. 
ಮೃತರು ಒಬ್ಬ ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News