×
Ad

ಕೆಸಿಎಫ್ ಒಮನ್ ಬ್ಲಡ್ ಸೈಬೋ ವತಿಯಿಂದ ರಕ್ತದಾನ ಶಿಬಿರ

Update: 2022-02-19 22:50 IST

ಸೊಹಾರ್: ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಒಮನ್ ಸೊಹಾರ್ ಝೋನ್ ವತಿಯಿಂದ ಕೆಸಿಎಫ್ ಡೇ 2022 ಪ್ರಯುಕ್ತ ಸೊಹಾರ್ ಮಿನಿಸ್ಟರಿ ಆಸ್ಪತ್ರೆ ಸಹಯೋಗದಲ್ಲಿ ರಕ್ತದಾನ ಶಿಬಿರವು ಸೊಹಾರ್ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಯಿತು. 

ಸುಮಾರು ಇಪ್ಪತೈದಕ್ಕೂ ಹೆಚ್ಚು ಜನರು ರಕ್ತದಾನ ಮಾಡುವ ಮೂಲಕ  ಶಿಬಿರವು ಪ್ರಶಂಸನೀಯವಾಯಿತು.
ಜುಮಾ ನಮಾಝಿನ ನಂತರ ನಡೆದ ಕೆಸಿಎಫ್ ಡೇ ಹಾಗೂ ಝೋನ್ ಮಟ್ಟದ ಪ್ರತಿಭೋತ್ಸವವು ನಡೆಯಿತು. ದುಆದ ಮೂಲಕ ಪ್ರಾರಂಭವಾದ ಕಾರ್ಯಕ್ರಮವು ಹಲವು ಸದಸ್ಯರ ಪ್ರತಿಭೆಗಳು ಪ್ರವಾದೀ ಕೀರ್ತನೆ, ಭಾಷಣ ಹಾಡು ಮುಂತಾದವುಗಳಿಂದ ಕಾರ್ಯಕ್ರಮ ನಡೆಯಿತು. ಇತ್ತೀಚೆಗೆ ನಿಧನರಾದ ತಾಯಕ್ಕೋಡ್ ಉಸ್ತಾದರ ಮೇಲೆ ತಹ್ಲೀಲ್ ಹಾಗೂ ದುಆ ನಡೆಸಲಾಯಿತು.

ವೇದಿಕೆಯಲ್ಲಿ ಕೆಸಿಎಫ್ ಒಮನ್  ಮೀಡಿಯಾ ಕಾರ್ಯದರ್ಶಿ  ಸಿದ್ದೀಕ್ ಮಾಂಬ್ಳಿ, ಕೆಸಿಎಫ್ ಒಮನ್ ಸಾಂತ್ವನ ವಿಭಾಗದ ಕಾರ್ಯದರ್ಶಿ ಇಕ್ಬಾಲ್ ಎರ್ಮಾಳ್, ಕೆಸಿಎಫ್ ಸೊಹಾರ್ ಝೋನ್ ಅಧ್ಯಕ್ಷ ಅಶ್ರಫ್ ಕುತ್ತಾರ್, ಸಾಂತ್ವನ ವಿಭಾಗದ ಅಧ್ಯಕ್ಷ ಅಝೀಝ್ ಉಪ್ಪಳ, ಕೋಶಾಧಿಕಾರಿ ಆರಿಫ್ ಮದಕ  ಹಾಗೂ ಝೋನ್ ನಾಯಕರು ಉಪಸ್ಥಿತರಿದ್ದರು.

ಕಾರ್ಯದರ್ಶಿ ಮುಬೀನ್ ಜೋಕಟ್ಟೆ ಸ್ವಾಗತಿಸಿ ಮೀಡಿಯಾ ಕಾರ್ಯದರ್ಶಿ ಕೆಎಸ್ಎಮ್ ಶಫೀಕ್  ಎಲಿಮಲೆ ವಂದಿಸಿದರು. ರಕ್ತದಾನ ಶಿಬಿರದಲ್ಲಿ ಅಬ್ದುಲ್ಲಾ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News