ಪ್ರಧಾನಿಯಿಂದ ಇಂದೋರ್ನಲ್ಲಿ ಗೋಬರ್-ಧಾನ್ ಘಟಕ ಉದ್ಘಾಟನೆ

Update: 2022-02-19 18:31 GMT

ಇಂದೋರ್, ಫೆ. 19: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಮಧ್ಯಪ್ರದೇಶದ ಇಂದೋರ್ ನಗರದಲ್ಲಿರುವ 550 ಟನ್ ಸಾಮರ್ಥ್ಯದ ಜೈವಿಕ ಸಿಎನ್ಜಿ ಘಟಕ 'ಗೋಬರ್-ಧಾನ್' ಅನ್ನು ವೀಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು.

ತ್ಯಾಜ್ಯದಿಂದ ಸಂಪತ್ತು ಆವಿಷ್ಕಾರ ಪರಿಕಲ್ಪನೆಯ ಆಧಾರದಲ್ಲಿ ಈ ಘಟಕಕ್ಕೆ ಗೋವರ್ಧನ ಘಟಕ ಎಂದು ಹೆಸರಿರಸಲಾಗಿದೆ. ಕಾಯಕ್ರಮದಲ್ಲಿ ಮಾತನಾಡಿದ ಪ್ರಧಾನಿ, ''ದೇಶಾದ್ಯಂತದ ನಗರಗಳಲ್ಲಿ ದಶಕಗಳಿಂದ ಸಾವಿರಾರು ಎಕರೆ ಭೂಮಿಯನ್ನು ಲಕ್ಷಾಂತರ ಟನ್ಗಳಷ್ಟು ತ್ಯಾಜಗಳು ಆಕ್ರಮಿಸಿಕೊಂಡಿವೆ. ಇದು ರೋಗಗಳ ಹರಡುವಿಕೆಗೆ ಪ್ರಮುಖ ಕಾರಣವಾದ ವಾಯು ಹಾಗೂ ಜಲ ಮಾಲಿನ್ಯಕ್ಕೆ ಕಾರಣವಾಗುತ್ತಿದೆ'' ಎಂದರು. ಭಾರತದಲ್ಲಿ ಕಳೆದ ಏಳೆಂಟು ವರ್ಷಗಳಿಂದ ಪೆಟ್ರೋಲ್ನಲ್ಲಿ ಎಥೆನಾಲ್ ಮಿಶ್ರಣವು ಕೇವಲ ಶೇ. 1ರಿಂದ 2 ಇತ್ತು. ಈಗ ಅದು ಶೇ. 8ಕ್ಕೆ ಏರಿಕೆಯಾಗಿದೆ ಎಂದು ಪ್ರಧಾನಿ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News