×
Ad

ಭಟ್ಕಳ ಟಿಎಂಸಿ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಇಸ್ಮಾಯೀಲ್ ಇಮ್ಶಾದ್ ಆಯ್ಕೆ

Update: 2022-02-20 14:25 IST

ಭಟ್ಕಳ, ಫೆ.20: ಭಟ್ಕಳ ಟೌನ್ ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಇಸ್ಮಾಯೀಲ್ ಇಮ್ಶಾದ್ ಮುಕ್ತೇಸರ ಆಯ್ಕೆಯಾದರು.

ಸಾಮಾಜಿಕ-ರಾಜಕೀಯ ಸಂಸ್ಥೆ ಮಜ್ಲಿಸೆ ಇಸ್ಲಾಹ್ ವಾ ತಂಝೀಮ್ ಬೆಂಬಲದೊಂದಿಗೆ ಅವರು ಈಗಾಗಲೇ ಈ ಹುದ್ದೆಗೆ ನಾಮನಿರ್ದೇಶನಗೊಂಡಿದ್ದರು. ನಗರಸಭೆಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.

ಪುರಸಭಾಧ್ಯಕ್ಷ ಫರ್ವೇಝ್‍ ಕಾಸಿಂಜೀ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆಗೆ ಇಸ್ಮಾಯೀಲ್ ಇಮ್ಶಾದ್ ಅವರನ್ನು ಪುರಸಭಾ ಸದಸ್ಯೆ ಫಾತಿಮಾ ಕೌಸರ್ ಸೂಚಿಸಿದರು.

 ಅಬ್ದುಲ್ ಅಝೀಂ ಮೊಹ್ತೆಶಾಮ್ ಮತ್ತು ಫಯಾಝ್ ಮುಲ್ಲಾ ನಾಮನಿರ್ದೇಶನವನ್ನು ಬೆಂಬಲಿಸಿದರು.

ಯುವ ಸಮಾಜ ಸೇವಕ ಇಸ್ಮಾಯಿಲ್ ಇಮ್ಶಾದ್ ಅವರು ಬಂದರ್ ರಸ್ತೆ, ಮಖ್ದೂಮ್ ಕಾಲನಿ, ಜಾಲಿ ರಸ್ತೆ ಹನುಮನಗರ ಮತ್ತು ಅಕ್ಕಪಕ್ಕದ ಪ್ರದೇಶಗಳನ್ನು ಒಳಗೊಂಡ ವಾರ್ಡ್ ನಂ.4ರ ಕೌನ್ಸಿಲರ್ ಆಗಿದ್ದರು. ನಗರಸಭೆಯಲ್ಲಿ ಕೌನ್ಸಿಲರ್ ಆಗಿ ಇದು ಮೊದಲ ಅವಧಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News