×
Ad

ವಯನಾಡ್: ಜೋಡಿ ಕೊಲೆ ದೋಷಿಗೆ ಮರಣದಂಡನೆ ವಿಧಿಸಿದ ನ್ಯಾಯಾಲಯ

Update: 2022-02-21 23:24 IST

ವಯನಾಡ್, ಫೆ. 21: ವಯನಾಡ್ ಜಿಲ್ಲೆಯ ವೆಲ್ಲಮುಂಡ ಕಂಡತ್ತುವಯಲಿಲ್ ಪ್ರದೇಶದಲ್ಲಿ 2018ರಲ್ಲಿ ನವ ದಂಪತಿಯನ್ನು ಹತ್ಯೆಗೈದ ಅಪರಾಧದಲ್ಲಿ ಇಲ್ಲಿನ ನ್ಯಾಯಾಲಯ ಸೋಮವಾರ ವ್ಯಕ್ತಿಯೋರ್ವನಿಗೆ ಮರಣದಂಡನೆ ವಿಧಿಸಿ ತೀರ್ಪು ನೀಡಿದೆ. 

ದೋಷಿ ಕೋಝಿಕ್ಕೋಡ್ ಜಿಲ್ಲೆ ಕವಿಲುಂಪಾರದ 48ರ ಹರೆಯದ ಕಲಂಗೊಟ್ಟುಮ್ಮಲ್ ವಿಶ್ವನಾಥನ್ ಗೆ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ವಿ. ಹ್ಯಾರಿಷ್ ಅವರು ಮರಣದಂಡನೆ ಹಾಗೂ 12 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ.

ವೆಲ್ಲಮುಂಡದ ಪುರಿಂಜಿಯಿಲ್ವಯಲ್ನ ಉಮ್ಮರ್(26) ಹಾಗೂ ಫಾತಿಮಾ (19) ದಂಪತಿಯನ್ನು 2018 ಜುಲೈ 6ರಂದು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯ ವಿಶ್ವನಾಥನ್ ಗೆ ಈ ಶಿಕ್ಷೆ ಹಾಗೂ ದಂಡ ವಿಧಿಸಿದೆ.

ಈ ಅವಳಿ ಕೊಲೆಯ ಹಿಂದಿನ ಮುಖ್ಯ ಕಾರಣ ದರೋಡೆ ಎಂದು ಪ್ರಾಸಿಕ್ಯೂಷನ್ ವಾದಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News