×
Ad

ತಾಂಜಾನಿಯಾ: ಇನ್‌ಸ್ಟಾಗ್ರಾಂ ತಾರೆ ಕಿಲಿಪೌಲ್‌ರನ್ನು ಗೌರವಿಸಿದ ಭಾರತೀಯ ರಾಯಭಾರ ಕಚೇರಿ

Update: 2022-02-22 22:44 IST

ಹೊಸದಿಲ್ಲಿ,ಫೆ.22: ಭಾರತೀಯ ಚಲನಚಿತ್ರಗಳ ಜನಪ್ರಿಯ ಹಾಡುಗಳಿಗೆ ತುಟಿಗಳನ್ನು ಕುಣಿಸುತ್ತಾ, ಆಕರ್ಷಕ ನೃತ್ಯ ಮಾಡುವ ಮೂಲಕ ಇನ್ಸ್ಟಾಗ್ರಾಂ ಮತ್ತಿತರ ಸಾಮಾಜಿಕ ಮಾಧ್ಯಮಗಳಲ್ಲಿ ಸಂಚಲನ ಸೃಷ್ಟಿಸಿರುವ ತಾಂಜಾನಿಯಾದ ಕಲಾವಿದ ಕಿಲಿ ಪೌಲ್ ಅವರನ್ನು ತಾಂಜಾನಿಯಾದಲ್ಲಿನ ಭಾರತೀಯ ರಾಯಭಾರಿ ಕಚೇರಿಯು ಸನ್ಮಾನಿಸಿದೆ.

 ಭಾರತದಲ್ಲಿ ಕೋಟ್ಯಂತರ ಮಂದಿಯ ಹೃದಯಗಳನ್ನು ಗೆದ್ದಿರುವ ‘ವಿಶೇಷ ಸಂದರ್ಶಕ’ ಕಿಲಿಪೌಲ್ ಅವರನ್ನು ತಾನು ಸೋಮವಾರ ಸನ್ಮಾನಿಸಿರುವುದಾಗಿ ತಾಂಜಾನಿಯಾದಲ್ಲಿನ ಭಾರತೀಯ ಹೈಕಮಿಶನ್ ಕಚೇರಿಯು ಬುಧವಾರ ಟ್ವೀಟ್‌ ಮಾಡಿದೆ.
 ಕಿಲಿ ಪೌಲ್ ಅವರು ಇನ್‌ಸ್ಟಾಗ್ರಾಂನಲ್ಲಿ 20 ಲಕ್ಷಕ್ಕೂ ಅಧಿಕ ಹಿಂಬಾಲಕರನ್ನು ಹೊಂದಿದ್ದಾರೆ. ಆಯುಷ್ಮಾನ್ ಖುರಾನಾ, ಗುಲ್ಪನಾಂಗ್, ರಿಚಾ ಚಡ್ಡಾ ಮತ್ತಿತರ ಸಿನೆಮಾ ತಾರೆಯರು, ಇನ್‌ಸ್ಟಾಗ್ರಾಂನಲ್ಲಿ ಕಿಲಿ ಪೌಲ್ ಅವರನ್ನು ಹಿಂಬಾಲಿಸುತ್ತಿದ್ದಾರೆ. 
ತನ್ನ ದೇಶದ ಸಾಂಪ್ರದಾಯಿಕ ಉಡುಪು ಧರಿಸಿ ಭಾರತೀಯ ಚಿತ್ರಗಳ ಹಾಡುಗಳಿಗೆ ಕಿಲಿ ಪೌಲ್ ನರ್ತಿಸುವ ಬಗ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News