×
Ad

ಪ್ರಿಯಾಂಕಾ ಗಾಂಧಿ ಹಸ್ತಲಾಘವಕ್ಕೆ ಮುಗಿಬಿದ್ದ ಬಿಜೆಪಿ ಕಾರ್ಯಕರ್ತರು: ವಿಡಿಯೋ ವೈರಲ್

Update: 2022-02-22 23:53 IST

ಲಕ್ನೋ: ಉತ್ತರ ಪ್ರದೇಶದಲ್ಲಿ ಚುನಾವಣೆಯ ಕಾವು ರಂಗೇರಿದೆ. ಪ್ರಮುಖ ರಾಜಕೀಯ ಪಕ್ಷಗಳು ಭರದಿಂದ ಪ್ರಚಾರ ನಡೆಸುತ್ತಿವೆ. ಈ ನಡುವೆ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿಗೆ ಬಿಜೆಪಿ ಕಾರ್ಯಕರ್ತರು ಹಸ್ತಲಾಘವ ಮಾಡಲು ಮುಗಿಬೀಳುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ.

ಈ ವಿಡಿಯೋ ಹಂಚಿಕೊಂಡಿರುವ ಯುವ ಕಾಂಗ್ರೆಸ್‌ ಅಧ್ಯಕ್ಷ ಶ್ರೀನಿವಾಸ ಬಿವಿ, ಬಿಜೆಪಿ ಕಾರ್ಯಕರ್ತರಲ್ಲೂ ಪ್ರಿಯಾಂಕಾ ಗಾಂಧಿಗಿರುವ ಜನಪ್ರಿಯತೆಗೆ ಇದು ಸಾಕ್ಷಿ ಎಂದು ಬರೆದಿದ್ದಾರೆ.

ಮೆರವಣಿಗೆ ನಡುವೆ ಪ್ರಿಯಾಂಕಾ ಗಾಂಧಿ ಬಿಜೆಪಿ ಕಾರ್ಯಕರ್ತರಿಗೆ ಕಾಂಗ್ರೆಸ್‌ ಪ್ರಣಾಳಿಕೆ ನೀಡುತ್ತಿರುವ ವಿಡಿಯೋ ಕೂಡಾ ವೈರಲ್‌ ಆಗಿದೆ.

ಇದನ್ನೂ ಓದಿ: ಮಲಯಾಳಂ ಹಿರಿಯ ನಟಿ ಕೆಪಿಎಸಿ ಲಲಿತಾ ನಿಧನ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News