ಯುರೋಪ್ ರಾಷ್ಟ್ರಗಳ ನಿರ್ಬಂಧದ ನಡುವೆಯೇ ಖತರ್ ಅಮೀರ್‌ಗೆ ಪತ್ರ ಬರೆದ ಪುಟಿನ್
Update: 2022-02-23 00:18 IST
ದೋಹಾ: ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಇನ್ನಷ್ಟು ಸಶಕ್ತಗೊಳಿಸುವ ಕ್ರಮಗಳ ಬಗ್ಗೆ ಹಾಗೂ ಪರಸ್ಪರ ಹಿತಾಸಕ್ತಿಯ ವಿಷಯಗಳಿಗೆ ನೆರವಾಗುವ ಉಪಕ್ರಮಗಳ ಬಗ್ಗೆ ಉಲ್ಲೇಖಿಸಿ ರಶ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮಂಗಳವಾರ ಖತರ್‌ನ ಅಮೀರ್ ಶೇಖ್ ತಮೀಮ್ ಬಿನ್ ಹಮದ್-ಅಲ್‌ಥಾನಿ ಅವರಿಗೆ ಪತ್ರ ಬರೆದಿದ್ದಾರೆ ಎಂದು ಖತರ್‌ನ ಸರಕಾರಿ ಸ್ವಾಮ್ಯದ ಸುದ್ಧಿಸಂಸ್ಥೆ ವರದಿ ಮಾಡಿದೆ.
ಈಗ ದೋಹಾದಲ್ಲಿ ನಡೆಯುತ್ತಿರುವ ಅನಿಲ ರಫ್ತುದಾರರ ಸಮಾವೇಶದಲ್ಲಿ ಪಾಲ್ಗೊಂಡಿರುವ ಅಲ್‌ಥಾನಿ ಅವರಿಗೆ ಪುಟಿನ್ ಅವರ ಪತ್ರವನ್ನು ರಶ್ಯಾದ ಇಂಧನ ಸಚಿವ ನಿಕೊಲಾಯ್ ಶುಲ್ಗಿನೋವ್ ಹಸ್ತಾಂತರಿಸಿದ್ದಾರೆ ಎಂದು ವರದಿ ತಿಳಿಸಿದೆ.