×
Ad

ತಮಿಳುನಾಡು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಕೇವಲ ʼಒಂದುʼ ಓಟು !

Update: 2022-02-23 12:21 IST

ಈರೋಡ್: ಇಲ್ಲಿನ ಭವಾನಿಸಾಗರದಲ್ಲಿ 11ನೇ ವಾರ್ಡ್‌ನಿಂದ ಸ್ಪರ್ಧಿಸಿದ್ದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಭ್ಯರ್ಥಿ ನರೇಂದ್ರನ್ ಅವರು ಕೇವಲ ಒಂದು ಮತವನ್ನು ಪಡೆದ ಘಟನೆ ಸದ್ಯ ವ್ಯಂಗ್ಯಕ್ಕೀಡಾಗಿರುವ ಕುರಿತು indiatoday ವರದಿ ಮಾಡಿದೆ.

ಮತ ಎಣಿಕೆ ಮುಗಿದಾಗ, ನರೇಂದ್ರನ್ ಅವರನ್ನು ಹೊರತುಪಡಿಸಿ, ಅವರ ಸ್ನೇಹಿತರು, ಕುಟುಂಬ ಮತ್ತು ಪಕ್ಷದ ಕಾರ್ಯಕರ್ತರು ಸೇರಿದಂತೆ ಯಾರೂ ಅವರಿಗೆ ಮತ ಹಾಕಿಲ್ಲ ಎಂದು ತಿಳಿದುಬಂದಿದೆ. ಒಟ್ಟು 162 ಮತಗಳ ಪೈಕಿ 84 ಮತಗಳನ್ನು ಗಳಿಸಿದ ಡಿಎಂಕೆ ಅಭ್ಯರ್ಥಿ ನರೇಂದ್ರ ಅವರನ್ನು ಸೋಲಿಸಿದ್ದಾರೆ.

ಫೆಬ್ರವರಿ 19 ರಂದು ತಮಿಳುನಾಡಿನ 21 ನಿಗಮಗಳು, 138 ಪುರಸಭೆಗಳು ಮತ್ತು 489 ಪಟ್ಟಣ ಪಂಚಾಯತ್‌ಗಳಲ್ಲಿ 12,500 ಕ್ಕೂ ಹೆಚ್ಚು ವಾರ್ಡ್‌ಗಳಿಗೆ ಚುನಾವಣೆ ನಡೆಯಿತು.

ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಡಿಎಂಕೆ ಮತ್ತು ಅದರ ಮಿತ್ರಪಕ್ಷಗಳು ಎಐಎಡಿಎಂಕೆಯೊಂದಿಗೆ ಎಲ್ಲಾ 21 ನಿಗಮಗಳಲ್ಲಿ ಮುನ್ನಡೆ ಸಾಧಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News