×
Ad

ನೂರಾರು ಪೊಲೀಸರು,ಅರೆಸೇನಾ ಪಡೆ ಸಿಬ್ಬಂದಿಯಿಂದ ಸುತ್ತುವರಿದಿದ್ದ ಅಜಯ್ ಮಿಶ್ರಾ ರಿಂದ ಲಖಿಂಪುರದಲ್ಲಿ ಮತ ಚಲಾವಣೆ

Update: 2022-02-23 14:42 IST

ಹೊಸದಿಲ್ಲಿ: ನೂರಾರು ಪೊಲೀಸರು ಮತ್ತು ಅರೆಸೇನಾ ಪಡೆ ಸಿಬ್ಬಂದಿಯಿಂದ ಸುತ್ತುವರಿದಿದ್ದ  ಕೇಂದ್ರ ಸಚಿವ ಅಜಯ್ ಮಿಶ್ರಾ ಟೆನಿ ಉತ್ತರ ಪ್ರದೇಶದ ಲಖಿಂಪುರದ ಮತಗಟ್ಟೆಯಲ್ಲಿ ಬುಧವಾರ  ಮತ ಚಲಾಯಿಸಿದರು.

ಕಳೆದ ವರ್ಷ ಲಖಿಂಪುರ ಖೇರಿಯಲ್ಲಿ ರೈತರ ಮೇಲೆ ದೌರ್ಜನ್ಯ ಎಸಗಿದ ಆರೋಪದ ಮೇಲೆ ವರದಿಗಾರರು ಸಚಿವರ ಪುತ್ರ ಆಶಿಶ್ ಮಿಶ್ರಾ ಕುರಿತಾಗಿ ಪ್ರಶ್ನಿಸಿದಾಗ ಸಚಿವರು "ವಿ" (ಗೆಲುವಿಗಾಗಿ) ಚಿಹ್ನೆಯನ್ನು ಪ್ರದರ್ಶಿಸಿದರು.

ಕಳೆದ ಅಕ್ಟೋಬರ್‌ನಲ್ಲಿ ಜೈಲು ಪಾಲಾಗಿದ್ದ ಆಶಿಶ್ ಮಿಶ್ರಾ, ಉತ್ತರಪ್ರದೇಶ ಚುನಾವಣಾ ಪ್ರಚಾರದ ಮಧ್ಯೆ ಒಂದು ವಾರದ ಹಿಂದೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.

ಹೆಚ್ಚಿನ ಸಂಖ್ಯೆಯ ಪೊಲೀಸರು ತಡೆಗೋಡೆ ರಚಿಸಿದ್ದರಿಂದ ಸಚಿವರು ಮತ್ತು ಮಾಧ್ಯಮದ ನಡುವೆ ತಳ್ಳಾಟ ಕಂಡುಬಂದಿತು.

ಸಚಿವರ ಹತ್ತಿರ ಹೋಗಲು ವಿಫಲರಾದ ಪತ್ರಕರ್ತರು "ಅಜಯ್ ಮಿಶ್ರಾ-ಜಿ!" ಎಂದು ಕೂಗಿ ಕರೆದು  ಅವರ  ಗಮನ ಸೆಳೆಯಲು ಪ್ರಯತ್ನಿಸಿದರು. ಮತಗಟ್ಟೆಗೆ ಮತದಾರ ತನ್ನೊಂದಿಗೆ ಇಷ್ಟೊಂದು ಭದ್ರತಾ ಸಿಬ್ಬಂದಿಯನ್ನು ಕರೆದೊಯ್ಯುತ್ತಿರುವ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸರಕಾರದಲ್ಲಿ ಗೃಹ ಖಾತೆಯ ರಾಜ್ಯ ಸಚಿವನಾಗಿರುವ   ಹಾಗೂ ಬಿಜೆಪಿಯ ಹಿರಿಯ ನಾಯಕ ಅಜಯ್ ಮಿಶ್ರಾ ಅವರು ಪೂರ್ವ ಉತ್ತರಪ್ರದೇಶದಲ್ಲಿ ವಿಶೇಷವಾಗಿ ಲಖಿಂಪುರದಲ್ಲಿ ಭಾರಿ ಪ್ರಭಾವವನ್ನು ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News