ಉಳ್ಳಾಲ: ಉರುಳಿಬಿದ್ದ ಜಾಯಿಂಟ್ ವೀಲ್: ಆರು ಮಂದಿಗೆ ಗಾಯ
Update: 2022-02-23 15:59 IST
ಉಳ್ಳಾಲ, ಫೆ.23: ಉರೂಸ್ ಹಿನ್ನೆಲೆಯಲ್ಲಿ ಖಾಸಗಿ ಜಾಗದಲ್ಲಿ ಅಳವಡಿಸಲಾಗಿದ್ದ ಜಾಯಿಂಟ್ ವೀಲ್ ಉರುಳಿಬಿದ್ದ ಪರಿಣಾಮ ಆರು ಮಂದಿ ಗಾಯಗೊಂಡ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ. ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಗೊಂಡವರನ್ನು ಉಮರ್ ಫಾರೂಕ್ (42), ಮುಹಮ್ಮದ್ ತಯ್ಯೂಬ್ (7), ಮಾಶಿತಾ(18), ನೂರ್ ಜಹಾನ್ (36), ಸಲೀಕಾ(28) ಮತ್ತು ಸಮೀರ್( 41) ಎಂದು ಗುರುತಿಸಲಾಗಿದೆ.
ಬಸ್ತಿಪಡ್ಪು ಖಾಸಗಿ ಜಮೀನಿನಲ್ಲಿ ಅಳವಡಿಸಲಾಗಿದ್ದ ತೊಟ್ಟಿಲು ತಿರುಗುತ್ತಿದ್ದಾಗಲೇ ತುಂಡಾಗಿ ಬಿದ್ದು ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.