×
Ad

ಗುಜರಾತ್: ಎಸ್ಸೆಸ್ಸೆಫ್ ರಾಷ್ಟ್ರೀಯ ಸಾಹಿತ್ಯೋತ್ಸವಕ್ಕೆ ಚಾಲನೆ

Update: 2022-02-23 23:55 IST

ಗುಜರಾತ್: ಎಸ್ಸೆಸ್ಸೆಫ್ ರಾಷ್ಟ್ರೀಯ ಸಾಹಿತ್ಯೋತ್ಸವಕ್ಕೆ ಗುಜರಾತಿನ ರಾಜ್‌ಕೋಟ್ ನಲ್ಲಿ ಚಾಲನೆ ನೀಡಲಾಯಿತು. ಅಲ್ಲಾಮಾ ಮುಫ್ತಿ ಮುಜಾಹಿದ್ ಅಲಿ ಬಾವಾ (ಮುಫ್ತಿ ಎ ರಾಜ್‌ಕೋಟ್) ಧ್ವಜಾರೋಹಣವನ್ನು ನೆರವೇರಿಸಿದರು.

ವಿವಿಧ ಅಕಾಡೆಮಿಕ್ ಚರ್ಚೆಗಳು, ಸಾಹಿತ್ಯ ಸಂವಾದಗಳು ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯುವ ಪ್ರಸ್ತುತ ನ್ಯಾಷನಲ್ ಸಾಹಿತ್ಯೋತ್ಸವದಲ್ಲಿ ಬೇರೆ ಬೇರೆ ರಾಜ್ಯಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಸಾಹಿತ್ಯ ಪ್ರಶಸ್ತಿ ವಿಜೇತರು, ವಿವಿಧ ವಿಶ್ವವಿದ್ಯಾಲಯಗಳ ಪ್ರೊಫೆಸರ್‌ ಗಳು, ರಿಸರ್ಚ್ ಸ್ಕಾಲರ್ ಗಳು, ವಿದ್ಯಾರ್ಥಿಗಳು ಸೇರಿದಂತೆ ಅನೇಕರು ವಿವಿಧ ಚರ್ಚಾಗೋಷ್ಠಿಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಉದ್ಘಾಟನಾ ಸಮಾರಂಭವು ಫೆ. 24 ರಂದು ಅಲ್ ಅಝ್‌ಹರ್ ಯುನಿವರ್ಸಿಟಿಯ ಪ್ರೊಫೆಸರ್ ಆಗಿರುವ ಡಾ. ಆಲಾ ಜಾನಿಬ್ ಅವರ ನೇತೃತ್ವದಲ್ಲಿ ನಡೆಯಲಿದೆ. ಡಾ. ಪದ್ಮಶ್ರೀ ಶಹಾಬುದ್ದೀನ್ ರಾಥೋಡ್ ಸದ್ರಿ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕವಿ ಮನೋಹರ್ ತ್ರಿವೇದಿ, ಬರಹಗಾರ ತುಷಾರ್ ಎಂ ವ್ಯಾಸ್, ಮೌಲಾನಾ ಡಾ. ಫಾರೂಖ್ ನ‌ಈಮಿ, ಮೌಲಾನಾ ನೌಶಾದ್ ಆಲಮ್ ಮಿಸ್ಬಾಹಿ, ಮೌಲಾನಾ ಝುಹೈರುದ್ದೀನ್ ನೂರಾನಿ ಮೊದಲಾದವರು ಭಾಗವಹಿಸಲಿದ್ದಾರೆ. 

ರಾಷ್ಟ್ರೀಯ ಸಾಹಿತ್ಯೋತ್ಸವದ ಸಮಾರೋಪ ಸಮಾರಂಭವನ್ನು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ ಪಿ ಅಬೂಬಕರ್ ಮುಸ್ಲಿಯಾರ್ ಉದ್ಘಾಟಿಸಲಿದ್ದಾರೆ. ಪದ್ಮಶ್ರೀ ಅಖ್ತರುಲ್ ವಾಸಿಹ್ ಮುಖ್ಯ ಅತಿಥಿಯಾಗಲಿದ್ದಾರೆ. ಡಾ. ಅಬ್ದುಲ್ ಹಕೀಂ ಅಝ್ಹರಿ, ಮೌಲಾನಾ ಶೌಕತ್ ನ‌ಈಮಿ, ಬಶೀರ್ ನಿಝಾಮಿ ಗುಜರಾತ್ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ. ರಾಷ್ಟ್ರೀಯ ಮಟ್ಟದ ಸಾಹಿತ್ಯ-ರಾಜಕೀಯ ಕ್ಷೇತ್ರಗಳ ಪ್ರಮುಖರು ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News