ರಾಜಸ್ಥಾನ ಬಜೆಟ್ ಬ್ಯೂಟಿಪಾರ್ಲರ್‌ನಲ್ಲಿ ಮೇಕಪ್ ಮಾಡಿದ 'ಕಪ್ಪು ಚರ್ಮದ ವಧು': ರಾಜ್ಯ ಬಿಜೆಪಿ ಅಧ್ಯಕ್ಷ

Update: 2022-02-24 02:08 GMT

ಜೈಪುರ: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಮಂಡಿಸಿದ 2022-23ನೇ ಸಾಲಿನ ಮುಂಗಡಪತ್ರವನ್ನು "ಚೆನ್ನಾಗಿ ಶೃಂಗರಿಸಿಕೊಂಡ ಕಪ್ಪು ವಧು"ವಿಗೆ ಹೋಲಿಸಿದ ಬಿಜೆಪಿ ಅಧ್ಯಕ್ಷ ಸತೀಶ್ ಪೂನಿಯಾ ವಿವಾದ ಸೃಷ್ಟಿಸಿದ್ದಾರೆ.

"ಇದು ಅಂದಗೆಟ್ಟ ಬಜೆಟ್‌ನಂತಿದೆ. ಕಪ್ಪು ವಧುವೊಬ್ಬಳನ್ನು ಬ್ಯೂಟಿಪಾರ್ಲರ್‌ಗೆ ಕರೆದೊಯ್ದು ಒಳ್ಳೆಯ ಮೇಕಪ್ ಮಾಡಿ ಕರೆತಂದಂತಿದೆ" ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಪೂನಿಯಾ ಅಭಿಪ್ರಾಯಪಟ್ಟಿದ್ದಾರೆ.

ಆಡಳಿತಾರೂಢ ಕಾಂಗ್ರೆಸ್, ಪೂನಿಯಾ ಹೇಳಿಕೆಯನ್ನು ಕಟುವಾಗಿ ಟೀಕಿಸಿದ್ದು, ಮಹಿಳೆಯರ ವಿರುದ್ಧ ಇಂಥ ಭಾಷೆ ಬಳಸಿರುವುದು ಖಂಡನೀಯ ಎಂದು ಹೇಳಿದೆ."ಸತೀಶ್ ಪೂನಿಯಾ ಅವರು ಮಹಿಳೆಯರನ್ನು ಅವಮಾನಿಸಿರುವುದು ಮಾತ್ರವಲ್ಲ; ಇಂಥ ಅಸಭ್ಯ ಮತ್ತು ಬೇಜವಾಬ್ದಾರಿಯುತ ಹೇಳಿಕೆಯ ಮೂಲಕ ಮಹಿಳೆಯರ ಘನತೆಗೂ ಧಕ್ಕೆ ತಂದಿದ್ದಾರೆ. ಮಹಿಳೆಯರ ವಿರುದ್ಧ, ಸಹೋದರಿಯರ ವಿರುದ್ಧ, ಹೆಣ್ಣುಮಕ್ಕಳ ವಿರುದ್ಧ ಅವಮಾನಕರ ಪದ ಬಳಸುವುದು ಬಿಜೆಪಿ ಮುಖಂಡರ ಹಾಲ್‌ಮಾರ್ಕ್ ಆಗಿದೆ" ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

"ಮಹಿಳೆಯರನ್ನು ಗೌರವಿಸುವುದು ಮೊದಲ ಆದ್ಯತೆ. ಪೂನಿಯಾ ಅವರು ಬಜೆಟ್ ಟೀಕಿಸುವ ವೇಳೆ ಮಹಿಳೆಯರ ಬಗ್ಗೆ ನೀಡಿದ ಇಂಥ ಜನಾಂಗೀಯ ಹೇಳಿಕೆ ಸಮಂಜಸವಲ್ಲ. ಮಹಿಳೆಯರನ್ನು ಗೌರವಿಸುವ ಹೊಣೆಗಾರಿಕೆ ನಮ್ಮೆಲ್ಲರದ್ದು" ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ವಿಶೇಷ ಕರ್ತವ್ಯಾದಿಕಾರಿ ಲೋಕೇಶ್ ಶರ್ಮಾ ಟ್ವೀಟ್ ಮಾಡಿದ್ದಾರೆ.

ರಾಜಸ್ಥಾನ ಬಜೆಟ್ ಬ್ಯೂಟಿಪಾರ್ಲರ್‌ನಲ್ಲಿ ಮೇಕಪ್ ಮಾಡಿದ ಕಪ್ಪು ವಧು: ರಾಜ್ಯ ಬಿಜೆಪಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News