ರಶ್ಯಾದ 5 ವಿಮಾನ, 1 ಹೆಲಿಕಾಪ್ಟರ್ ಹೊಡೆದುರುಳಿಸಿದ್ದೇವೆ ಎಂದ ಉಕ್ರೇನ್
ಮಾಸ್ಕೊ: ರಷ್ಯಾದ ಐದು ವಿಮಾನಗಳು ಹಾಗೂ ಒಂದು ಹೆಲಿಕಾಪ್ಟರ್ ಅನ್ನು ಉಕ್ರೇನ್‌ನ ಲುಹಾನ್ಸ್ಕ್ ಪ್ರದೇಶದಲ್ಲಿ ಹೊಡೆದುರುಳಿಸಲಾಗಿದೆ ಎಂದು ಉಕ್ರೇನ್ ಮಿಲಿಟರಿ ಗುರುವಾರ ಹೇಳಿಕೊಂಡಿದೆ ಎನ್ನುವುದಾಗಿ ಸುದ್ದಿ ಸಂಸ್ಥೆ AFP ವರದಿ ಮಾಡಿದೆ.
ಲುಹಾನ್ಸ್ಕ್ ಉಕ್ರೇನ್‌ನ ಪ್ರತ್ಯೇಕತಾವಾದಿ ಪ್ರದೇಶಗಳಲ್ಲಿ ಒಂದಾಗಿದೆ. ಈ ಪ್ರದೇಶವನ್ನು ಈ ವಾರದ ಆರಂಭದಲ್ಲಿ ರಷ್ಯಾ ಸ್ವತಂತ್ರವೆಂದು ಗುರುತಿಸಿದೆ.
ಏತನ್ಮಧ್ಯೆ, ರಷ್ಯಾದ ರಕ್ಷಣಾ ಸಚಿವಾಲಯವು ಉಕ್ರೇನಿಯನ್ ವಾಯು ರಕ್ಷಣೆಯನ್ನು 'ತಟಸ್ಥಗೊಳಿಸಲಾಗಿದೆ' ಎಂದು ಹೇಳಿದೆ.
ವರದಿಗಳ ಪ್ರಕಾರ, ರಷ್ಯಾ ಹಾಗೂ ಬೆಲಾರಸ್‌ನೊಂದಿಗಿನ ಉಕ್ರೇನ್‌ನ ಉತ್ತರ ಗಡಿಯಲ್ಲಿ ರಷ್ಯಾ ಫಿರಂಗಿ ದಾಳಿ ನಡೆಸಿತು. ಉಕ್ರೇನಿಯನ್ ಪಡೆಗಳು ಪ್ರತಿಯಾಗಿ ಗುಂಡಿನ ದಾಳಿ ನಡೆಸುತ್ತಿದ್ದವು.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗುರುವಾರ ದೂರದರ್ಶನ ಭಾಷಣದಲ್ಲಿ ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿದರು.
ಅವರ ಘೋಷಣೆಯ ನಂತರ ಉಕ್ರೇನ್‌ನ ವಿವಿಧ ಭಾಗಗಳಲ್ಲಿ ದೊಡ್ಡ ಸ್ಫೋಟಗಳು ಕೇಳಿಬಂದವು. ವಿಶ್ವಸಂಸ್ಥೆಯ . ತುರ್ತು ಸಭೆಯಲ್ಲಿ ಉಕ್ರೇನ್ ಪ್ರತಿನಿಧಿಯು "ಯುದ್ಧವನ್ನು ನಿಲ್ಲಿಸಲು" ಎಲ್ಲರಿಗೂ ಮನವಿ ಮಾಡಿದರು.