×
Ad

ಉಕ್ರೇನ್ ನಲ್ಲಿರುವ ಭಾರತೀಯರು ಮನೆಯಲ್ಲೇ ಇರಿ: ಭಾರತದ ರಾಯಭಾರ ಕಚೇರಿ ಸಲಹೆ

Update: 2022-02-24 12:40 IST
SOURCE : PTI

ಹೊಸದಿಲ್ಲಿ: ಸಂಘರ್ಷ ಪೀಡಿತ ಪೂರ್ವ ಯುರೋಪಿಯನ್ ರಾಷ್ಟ್ರದಲ್ಲಿ ವಾಸಿಸುತ್ತಿರುವ ಭಾರತೀಯ ಪ್ರಜೆಗಳಿಗೆ ಉಕ್ರೇನ್‌ನಲ್ಲಿರುವ ಭಾರತದ ರಾಯಭಾರ ಕಚೇರಿಯು "ಶಾಂತತೆಯನ್ನು ಕಾಪಾಡಿಕೊಳ್ಳಲು ಮತ್ತು ಸುರಕ್ಷಿತವಾಗಿರಲು" ಕೇಳಿಕೊಂಡಿದೆ.

 ರಷ್ಯಾದ ಮಿಲಿಟರಿ ಕಾರ್ಯಾಚರಣೆ ಘೋಷಣೆಯ ಬಳಿಕ ಉಕ್ರೇನ್‌ ತನ್ನ ವಾಯುಪ್ರದೇಶವನ್ನು ಮುಚ್ಚಿದ ನಂತರ ಉಕ್ರೇನ್ ಗೆ ಹೋಗುವ ಏರ್ ಇಂಡಿಯಾ ವಿಮಾನವು ದಿಲ್ಲಿಗೆ ಹಿಂತಿರುಗಿದ ಕೆಲವೇ ಗಂಟೆಗಳ ನಂತರ ಈ ಸಲಹೆ ಬಂದಿದೆ.

ಇಂದು ಬೆಳಿಗ್ಗೆ ರಷ್ಯಾ ನೆರೆಯ ಉಕ್ರೇನ್ ಮೇಲೆ ಆಕ್ರಮಣ ಮಾಡಿದ ನಂತರ  ಭಾರತೀಯ ರಾಯಭಾರ ಕಚೇರಿಯು ದೇಶದಲ್ಲಿ ವಾಸಿಸುವ ವಿದ್ಯಾರ್ಥಿಗಳು ಮತ್ತು ಇತರರಿಗೆ ಮಾರ್ಗಸೂಚಿಗಳನ್ನು ನೀಡಿದೆ.

" ಉಕ್ರೇನ್‌ನಲ್ಲಿರುವ ಆತ್ಮೀಯ ಭಾರತೀಯರೇ, ಉಕ್ರೇನ್‌ನಲ್ಲಿ ಪ್ರಸ್ತುತ ಪರಿಸ್ಥಿತಿ ಹೆಚ್ಚು ಅನಿಶ್ಚಿತವಾಗಿದೆ. ದಯವಿಟ್ಟು ನೀವು ನಿಮ್ಮ ಮನೆಗಳು, ಹಾಸ್ಟೆಲ್‌ಗಳು, ವಸತಿ ಅಥವಾ ಸಾರಿಗೆಯಾಗಿರಲಿ, ಎಲ್ಲೇ ಇದ್ದರೂ  ಶಾಂತವಾಗಿರಿ ಹಾಗೂ  ಸುರಕ್ಷಿತವಾಗಿರಿ’’ ಎಂದು ಉಕ್ರೇನ್‌ನಲ್ಲಿರುವ ಭಾರತದ ರಾಯಭಾರ ಕಚೇರಿ ಸಲಹೆಯಲ್ಲಿ ತಿಳಿಸಿದೆ.

ರಾಯಭಾರ ಕಚೇರಿಯು 24 ಗಂಟೆಗಳ ಸಹಾಯವಾಣಿಯನ್ನು ನಡೆಸುತ್ತಿದೆ.

"ನಾವು ವೇಗವಾಗಿ ಬದಲಾಗುತ್ತಿರುವ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಭಾರತೀಯರ ವಿಶೇಷವಾಗಿ ವಿದ್ಯಾರ್ಥಿಗಳ  ಸುರಕ್ಷತೆಯ ಮೇಲೆ ಕೇಂದ್ರೀಕರಿಸಲಾಗಿದೆ. ಎಂಇಎ (ವಿದೇಶಾಂಗ ವ್ಯವಹಾರಗಳ ಸಚಿವಾಲಯ) ನಿಯಂತ್ರಣ ಕೊಠಡಿಯನ್ನು ವಿಸ್ತರಿಸಲಾಗುತ್ತಿದೆ ಮತ್ತು 24x7 ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದೆ" ಎಂದು ಮೂಲವೊಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News