ರಷ್ಯಾದ ಶೆಲ್ ದಾಳಿಗೆ ಕನಿಷ್ಠ 7 ಮಂದಿ ಸಾವು: ಉಕ್ರೇನ್
ಮಾಸ್ಕೊ: ರಷ್ಯಾದ ಶೆಲ್ ದಾಳಿಯಲ್ಲಿ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ ಹಾಗೂ ಒಂಬತ್ತು ಮಂದಿ ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಆಂತರಿಕ ವ್ಯವಹಾರಗಳ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮಿಲಿಟರಿ ಕಾರ್ಯಾಚರಣೆಯನ್ನು ಅಧಿಕೃತಗೊಳಿಸಿದ ನಂತರ ರಷ್ಯಾದ ಪಡೆಗಳು ಉಕ್ರೇನ್‌ನ ಹಲವಾರು ನಗರಗಳ ಮೇಲೆ ಕ್ಷಿಪಣಿಗಳನ್ನು ಹಾರಿಸಿದವು. ಉಕ್ರೇನ್ ರಾಜಧಾನಿ ಕಿವ್‌ನಲ್ಲಿ ಸ್ಫೋಟಗಳಾಗಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ. ರಾಜಧಾನಿಯ ಮುಖ್ಯ ವಿಮಾನ ನಿಲ್ದಾಣದ ಬಳಿಯೂ ಗುಂಡಿನ ಸದ್ದು ಕೇಳಿಸಿದೆ.
ನಿಖರವಾದ ಶಸ್ತ್ರಾಸ್ತ್ರಗಳೊಂದಿಗೆ ಉಕ್ರೇನ್‌ನಲ್ಲಿ ವಾಯು ನೆಲೆಗಳು, ವಾಯು ರಕ್ಷಣೆಗಳನ್ನು ನಾಶಪಡಿಸಲಾಗಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯವು ಹೇಳಿದೆ.
ರಷ್ಯಾದ ಭೂ ಪಡೆಗಳು ಗುರುವಾರ ಹಲವಾರು ದಿಕ್ಕುಗಳಿಂದ ಉಕ್ರೇನ್‌ಗೆ ದಾಟಿವೆ ಎಂದು ಉಕ್ರೇನ್‌ನ ಗಡಿ ಕಾವಲು ಸೇವೆಯು ಹೇಳಿದೆ.
ರಷ್ಯಾದ ಟ್ಯಾಂಕ್‌ಗಳು ಮತ್ತು ಇತರ ಭಾರೀ ಉಪಕರಣಗಳು ಉತ್ತರ ವಲಯಗಳಲ್ಲಿ ಗಡಿಯನ್ನು ದಾಟಿವೆ ಎಂದು ಉಕ್ರೇನ್‌ನ ಗಡಿ ಕಾವಲು ಸೇವೆಯು ಹೇಳಿದೆ.
WATCH: Missile hits airport in Ivano-Frankivsk, Ukraine pic.twitter.com/EnskxXhpnq
— BNO News (@BNONews) February 24, 2022