ಉಕ್ರೇನ್‌ಗೆ ಸಂಯಮವಹಿಸಲು ಚೀನಾ ಕರೆ
Update: 2022-02-24 14:27 IST
ಬೀಜಿಂಗ್: ಉಕ್ರೇನ್‌ನಲ್ಲಿನ ಪರಿಸ್ಥಿತಿಯಲ್ಲಿ ಭಾಗಿಯಾಗಿರುವ ಎಲ್ಲರೂ ಸಂಯಮದಿಂದ ವರ್ತಿಸುವಂತೆ ಚೀನಾ ಗುರುವಾರ ಪುನರುಚ್ಚರಿಸಿದೆ ಹಾಗೂ ರಷ್ಯಾದ ಕ್ರಮಗಳು “ಆಕ್ರಮಣ’’ ಎಂದು ವಿದೇಶಿ ಪತ್ರಕರ್ತರ ವಿವರಣೆಯನ್ನು ಚೀನಾ ತಿರಸ್ಕರಿಸಿದೆ.
ನಿಯಮಿತ ದೈನಂದಿನ ಸುದ್ದಿಗೋಷ್ಟಿಯಲ್ಲಿ ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನ್ಯಿಂಗ್ ಅವರು ಈ ಹೇಳಿಕೆಗಳನ್ನು ನೀಡಿದ್ದಾರೆ.