ರಷ್ಯಾದೊಂದಿಗೆ ಸಶಸ್ತ್ರ ಸಂಘರ್ಷ: 40 ಉಕ್ರೇನ್ ಸೈನಿಕರು, 10 ನಾಗರಿಕರು ಮೃತ್ಯು
Update: 2022-02-24 16:10 IST
ಮಾಸ್ಕೊ: ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮಿಲಿಟರಿ ಕಾರ್ಯಾಚರಣೆಯನ್ನು ಅಧಿಕೃತಗೊಳಿಸಿದ ನಂತರ ರಷ್ಯಾದ ಪಡೆಗಳು ಉಕ್ರೇನ್‌ನ ಹಲವಾರು ನಗರಗಳ ಮೇಲೆ ಕ್ಷಿಪಣಿ ದಾಳಿ ನಡೆಸಿವೆ. ಮಿಲಿಟರಿ ಕಾರ್ಯಾಚರಣೆಯ ಮೊದಲ ಗಂಟೆಯಲ್ಲಿ 40 ಕ್ಕೂ ಹೆಚ್ಚು ಉಕ್ರೇನಿಯನ್ ಸೈನಿಕರು ಹಾಗೂ 10 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು AFP ಸುದ್ದಿಸಂಸ್ಥೆ ವರದಿ ಮಾಡಿದೆ.
‘ಸುಮಾರು 50 ರಷ್ಯಾದ ಆಕ್ರಮಣಕಾರರನ್ನು’ ಕೊಂದಿರುವುದಾಗಿ ಉಕ್ರೇನ್ ಹೇಳಿಕೊಂಡಿದೆ. ರಷ್ಯಾದ ಭೂ ಪಡೆಗಳು ಹಲವಾರು ದಿಕ್ಕುಗಳಿಂದ ಉಕ್ರೇನ್‌ಗೆ ದಾಳಿ ಮಾಡಿದ ಗಂಟೆಗಳ ನಂತರ ಈ ಘೋಷಣೆ ಬಂದಿದೆ.
ನಿಖರವಾದ ಶಸ್ತ್ರಾಸ್ತ್ರಗಳೊಂದಿಗೆ ಉಕ್ರೇನ್‌ನಲ್ಲಿ ವಾಯು ನೆಲೆಗಳು, ವಾಯು ರಕ್ಷಣಾಗಳನ್ನು ನಾಶಪಡಿಸಲಾಗಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯವು ಹೇಳಿದೆ.
ದೇಶದ ಪೂರ್ವ ಭಾಗದಲ್ಲಿ ರಷ್ಯಾದ ಐದು ವಿಮಾನಗಳು ಹಾಗೂ ಒಂದು ಹೆಲಿಕಾಪ್ಟರ್ ಅನ್ನು ಉರುಳಿಸಿದ್ದೇನೆ ಎಂದು ಉಕ್ರೇನ್ ಹೇಳಿಕೊಂಡಿದೆ.