ಉಕ್ರೇನಿನಲ್ಲಿ ಅತಂತ್ರರಾಗಿರುವ ಭಾರತೀಯ ವಿದ್ಯಾರ್ಥಿಗಳಿಗಾಗಿ ಸಹಾಯವಾಣಿ ಆರಂಭ
ಹೊಸದಿಲ್ಲಿ,ಫೆ.24: ರಷ್ಯ ವಿರುದ್ಧ ನಡೆಯುತ್ತಿರುವ ಯುದ್ಧದ ನಡುವೆ ಉಕ್ರೇನಿನಲ್ಲಿ ಸಿಕ್ಕಿಕೊಂಡಿರುವ ಭಾರತೀಯ ವಿದ್ಯಾರ್ಥಿಗಳಿಗೆ ನೆರವಾಗಲು 24 ಗಂಟೆಗಳ ಸಹಾಯವಾಣಿಯನ್ನು ಕೇಂದ್ರ ಸರಕಾರವು ಆರಂಭಿಸಿದೆ.
ದಿಲ್ಲಿಯಲ್ಲಿ ದಿನದ 24 ಗಂಟೆಗಳ ಕಾಲವೂ ಕಾರ್ಯ ನಿರ್ವಹಿಸುವ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದ್ದು,+911123012113, +911123914104,+911123017905 ಮತ್ತು 1800118797 ಸಹಾಯವಾಣಿ ಸಂಖ್ಯೆಗಳಾಗಿವೆ.
ಉಕ್ರೇನಿನಲ್ಲಿ ಅತಂತ್ರರಾಗಿರುವ ಭಾರತೀಯ ಪ್ರಜೆಗಳಿಗಾಗಿ ಕೀವ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯೂ ಸಲಹಾಸೂಚಿಯೊಂದನ್ನು ಹೊರಡಿಸಿದೆ. ಉಕ್ರೇನಿನ ವಾಯುಪ್ರದೇಶವನ್ನು ಮುಚ್ಚಿರುವುದರಿಂದ ನಿಗದಿತ ವಿಶೇಷ ವಿಮಾನಯಾನಗಳನ್ನು ರದ್ದುಗೊಳಿಸಲಾಗಿದೆ ಎಂದು ಅದು ತಿಳಿಸಿದೆ.
ಭಾರತೀಯರು ದೇಶದ ಪಶ್ಚಿಮ ಭಾಗಕ್ಕೆ ಸ್ಥಳಾಂತರಗೊಳ್ಳುವಂತಾಗಲು ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಮತ್ತು ಈ ಬಗ್ಗೆ ಮಾಹಿತಿಯನ್ನು ಶೀಘ್ರವೇ ಒದಗಿಸಲಾಗುವುದು ಎಂದೂ ರಾಯಭಾರ ಕಚೇರಿಯು ತಿಳಿಸಿದೆ.
ಉಕ್ರೇನಿನಲ್ಲಿ ಸಿಕ್ಕಿಕೊಂಡಿರುವ ಭಾರತೀಯರಿಗಾಗಿ ಹೆಚ್ಚುವರಿ ಸಹಾಯವಾಣಿ ಸಂಖ್ಯೆಗಳು:
+38 0997300428,+38 0997300483,+38 0933980327,+38 0635917881,+38 0935046170